ಪ್ರಾರಂಭ ಪದದ ಹುಡುಕು
ಹಂಗಿನರಮನೆಗಿಂತ | ಇಂಗಡದ ಗುಡಿ ಲೇಸು | ಭಂಗಬಟ್ಟುಂಬ ಬಿಸಿಯನ್ನಕ್ಕಿಂತಲೂ | ತಂಗುಳವೆ ಲೇಸು ಸರ್ವಜ್ಞ ||
ಹಂಗಿನಾ ಹಾಲಿನಿಂ | ದಂಬಲಿಯ ತಿಳಿ ಲೇಸು | ಭಂಗಬಟ್ಟುಂಬ ಬಿಸಿಯಿಂದ ತಿರಿವವರ | ತಂಗುಳವೆ ಲೇಸು ಸರ್ವಜ್ಞ ||
ಹಡಗು ಗಾಳಿಗೆ ಲೇಸು | ಗುಡುಗು ಮಳೆ ಬರಲೇಸು | ಒಡಹುಟ್ಟಿದವರು ಇರಲೇಸು ಊರಿಂಗೆ ಬಡಿಗೆ ಲೇಸಂದ ಸರ್ವಜ್ಞ ||
ಹಣ ಗುಣದಿ ಬಲವುಳ್ಳ | ಕೆಡೆಬೀಳಲಿರಿದರೂ | ನಡುವೆಂದು ಬಗೆದ ಪತಿಪ್ರತೆ ಸೀತೆಗಂ | ಎಣೆಯಾರು ಹೇಳು ಸರ್ವಜ್ಞ ||
ಹಣತೆ ಭತ್ತವು ಅಲ್ಲ | ಅಣಬೆ ಸತ್ತಿಗೆಯಲ್ಲ | ಕಣಕದಾ ಕಲ್ಲು ಮಣಿಯಲ್ಲ ಬಣಜಿಗನು | ಗುಣವಂತನಲ್ಲ ಸರ್ವಜ್ಞ ||
ಹಣವಿಗೊಂದು ರವಿ | ಪ್ಪಣಕೊಂದು ಬೇಳೆಯನು | ತ್ರಿಣಯನಾ ಮುಕುಟವಾದರಾ ಅಕ್ಕಸಾಲೆ | ಟೊನೆಯದೇ ಬಿಡನು ಸರ್ವಜ್ಞ ||
ಹತ್ತು ಸಾವಿರ ಕಣ್ಣು | ಕತ್ತಿನಲಿ ಕಿರಿಬಾಲ | ತುತ್ತನೇ ಹಿಡಿದು ತರುತಿಹದು ಕವಿಗಳಿದ | ರರ್ಥವೇನು ಪೇಳಿ ಸರ್ವಜ್ಞ ||
ಹತ್ತು ಸಾವಿರ ಕಣ್ಣು | ನೆತ್ತಿಯಲಿ ಬಾಲವು | ಹತ್ತೆಂಟು ಮಿಕವ ಹಿಡಿಯುವದು ಕವಿಗಳಿದರರ್ಥವನು ಪೇಳಿ ಸರ್ವಜ್ಞ ||
ಹತ್ತು ಸಾವಿರ ಕಣ್ಣು | ನೆತ್ತಿಲಾದರು | ಬಾಲ ಹುತ್ತಿನಾ ಹುಳವ ಹಿಡಿಯುವದು ಕವಿಜನರೆ | ಮೊತ್ತವಿದನ್ಹೇಳಿ ಸರ್ವಜ್ಞ ||
ಹತ್ತುತಲೆ ಕೆಂಪು | ಮತ್ತಾರುತಲೆ ಕರಿದು | ಹೆತ್ತವ ನೊಡಲ ನುರಿಸುವದು | ಕವಿಗಳಿದರರ್ಥವನು ಪೇಳಿ ಸರ್ವಜ್ಞ ||
ಹದ ಬೆದೆಯಲಾರಂಭ | ಕದನಲಿ ಕೂರಂಬ | ನದಿ ಹಾಯುವಲಿ ಹರಗೋಲ ಮರೆತು | ವಿಧಿಯ ಬೈದರೇನು ಫಲ ಸರ್ವಜ್ಞ ||
ಹಂದಿ ಚಂದನಸಾರ | ಗಂಧವ ಬಲ್ಲುದೇ ಒಂದುವ ತಿಳಿಯಲರಿಯದನ - ಗುರುವಿಗೆ ನಿಂದ್ಯವೇ ಬಹುದು ಸರ್ವಜ್ಞ
ಹಂದೆ ಭಟರೊಳು ಹೊಲ್ಲ | ನಿಂದೆಯಾ ನುಡಿ ಹೊಲ್ಲ | ಕುಂದುಗುಲದವಳ ತರ ಹೊಲ್ಲ ಉರಿಯೊಳಗೆ | ನಿಂದಿರಲು ಹೊಲ್ಲ ಸರ್ವಜ್ಞ ||
ಹನುಮಂತನಿಂ ಲಂಕೆ | ಫಲ್ಗುಣನಿಂದ ಜಾಂಡವನ | ತ್ರಿನಯನಿಂ ತ್ರಿಪುರ ಕೆಟ್ಟಂತೆ ಜಗವು ಕುಂ | ಟಿಣಿಯಿಂದ ಕೆಡಗು ಸರ್ವಜ್ಞ ||
ಹರ ತನ್ನೊಳಿರ್ದುದ | ಗುರುತೋರಿ | ದಿರಲಹುದೆ | ಮರನೊಳಗ್ನಿ ಇರುತಿರ್ದು - ತನ್ನ ತಾ ನುರಿವುದ ಕಂಡ ? ಸರ್ವಜ್ಞ