ಪ್ರಾರಂಭ ಪದದ ಹುಡುಕು
ಉಕ್ಕುವದು ಸೊಕ್ಕುವದು | ಕೆಕ್ಕನೆ ಕಲೆಯುವದು | ರಕ್ಕಸನ ವೋಲು ಮದಿಸುವದು ಒಂದು ಸೆರೆ | ಯಕ್ಕಿಯಾ ಗುಣವು ಸರ್ವಜ್ಞ ||
ಉಗರ ತಿದ್ದಿಸುವದದು | ಮುಗುಳುನಗೆ ನಗಿಸುವದು | ಹಗರಣದ ಮಾತ ನಡಿಸುವದು ಬೋನದಾ | ಬಗೆಯ ನೋಡೆಂದ ಸರ್ವಜ್ಞ ||
ಉಂಡು ಕೆಂಡವ ಕಾಸಿ | ಶತಪಥ ನಡೆದು | ಉಂಡೆಡದ ಮಗ್ಗುಲಲಿ ಮಲಗೆ ವೈದ್ಯನಾ | ಭಂಡಾಟವಿಲ್ಲ ಸರ್ವಜ್ಞ ||
ಉಂಡು ನೂರಡಿ ಎಣಸಿ | ಕೆಂಡಕ್ಕೆ ಕೈ ಕಾಸಿ | ಗಂಡು ಮೇಲಾಗಿ ಮಲಗಿದನು ವೈದ್ಯನಾ | ಮಿಂಡ ಕಾಣಯ್ಯ ಸರ್ವಜ್ಞ ||
ಉಂಡುಂಡು ಕಡೆಕಡೆದು | ಖಂಡೆಯನು ಮಸೆ ಮಸೆದು ಕಂಡವರ ಕಾಲ ಕೆದರುವಾ ದುರುಳರನು | ಗುಂಡಿಲಿಕ್ಕೆಂದ ಸರ್ವಜ್ಞ ||
ಉಡುಹೀನ ಮೂಡಲುಂ | ನುಡಿಹೇನ ಬಡವಲುಂ | ಕಡುಕೋಪದವರು ಪಡುವಲಲಿ ತೆಂಕಲೊಳು | ಸಡಗರದಲಿಹರು ಸರ್ವಜ್ಞ ||
ಉಣ ಬಂದ ಲಿಂಗಕ್ಕೆ | ಉಣಲ್ಲಿಕ್ಕದಂತರಿಸಿ ಉಣದಿರ್ಪ ಲಿಂಗಕ್ಕುಣ ಬಡಿಸಿ - ಕೈಮುಗಿವ ಬಣಗುಗಳ ನೋಡ ಸರ್ವಜ್ಞ delete
ಉಣಲಡಿಗೆ ಹಲವಾಗಿ | ಕಣಿಕ ತಾನೊಂದಯ್ಯ ಮಣಲೇಸು ದೈವ ಘನವಾಗಿ - ಲೋಕಕ್ಕೆ ತ್ರಿಣಯನ ಸರ್ವಜ್ಞ
ಉಣ್ಣದಲೆ ಉರಿಯುವರು | ಮಣ್ಣಿನಲಿ ಮೆರೆಯುವರು | ಗಾಜೊಂದು ಲೋಹದೊಳಗಲ್ಲ ಅಂಬಲಿಯು | ಭೋಜನದೊಳಲ್ಲ ಸರ್ವಜ್ಞ ||
ಉತ್ತಮದ ವರ್ಣಿಗಳೆ | ಉತ್ತಮರು ಎನಬೇಡ | ಮತ್ತೆ ತನ್ನಂತೆ ಬಗೆವರನೆಲ್ಲರನು | ಉತ್ತಮರು ಎನ್ನು ಸರ್ವಜ್ಞ ||
ಉತ್ತಮರು ಎಂಬುವರು | ಸತ್ಯದಲಿ ನಡೆಯುವರು | ಉತ್ತಮರು ಅಧಮರೆನಬೇಡ ಅವರೊಂದು | ಮುತ್ತಿನಂತಿಹರು ಸರ್ವಜ್ಞ ||
ಉತ್ತಮರು ಪಾಲ್ಗೊಡಲೊ | ಳೆತ್ತಿದರೆ ಜನ್ಮವನು | ಉತ್ತಮರು ಅಧಮರೆನಬೇಡಿ ಹೊಲೆಯಿಲ್ಲ | ದುತ್ತಮರು ಎಲ್ಲಿ ಸರ್ವಜ್ಞ ||
ಉತ್ತರೆಯು ಬರದಿಹರೆ | ಹೆತ್ತ ತಾಯ್ತೊರೆದರೆ | ಸತ್ಯವಂ ತಪ್ಪಿ ನಡೆದರೀಲೋಕ ವಿ | ನ್ನೆತ್ತ ಸೇರುವದು ಸರ್ವಜ್ಞ ||
ಉತ್ತೊಮ್ಮೆ ಹರಗದಲೆ | ಬಿತ್ತೊಮ್ಮೆ ನೋಡದಲೆ ಹೊತ್ತೇರಿ ಹೊಲಕೆ ಹೋಗಿಹರೆ ಅವ ತನ್ನ | ನೆತ್ತರವ ಸುಡುವ ಸರ್ವಜ್ಞ ||
ಉದ್ದರಿಯ ಕೊಟ್ಟಣ್ಣ | ಹದ್ದಾದ ಹಾವಾದ | ಎದ್ದೆದ್ದು ಬರುವ ನಾಯಾದ ಮೈಲಾರ ಗೊಗ್ಗಯ್ಯನಾದ ಸರ್ವಜ್ಞ ||