ಪ್ರಾರಂಭ ಪದದ ಹುಡುಕು
ಅಂಗಿ ಅರಿವೆಯ ಮಾರಿ | ಭಂಗಿಯನು ತಾ ಸೇದಿ | ಮಂಗನಂದದಲಿ ಕುಣಿವಾತ ಭವ - ಭವದಿ | ಭಂಗಗೊಳುತಿಹನು ಸರ್ವಜ್ಞ ||
ಅಂದಿನಾ | ಪುಷ್ಪದತ್ತ || ಬಂದ ವರರುಚಿಯಾಗಿ ಮುಂ ದೇವಸಾಲೆ ಸರ್ವಜ್ಞ - ನೆಂದೆನಿಸಿ ನಿಂದವನು ತಾನೇ ಸರ್ವಜ್ಞ
ಅಂದು ಕಾಮನ ಹರನು | ಕೊಂದನೆಂಬುದು ಪುಸಿಯು | ಇಂದುವದನೆಯರ ಕಡೆಗಣ್ಣ ನೋಟದಲಿ | ನಿಂದಿಹನು ಸ್ಮರನು ಸರ್ವಜ್ಞ ||
ಅಂಧಕನು ನಿಂದಿರಲು | ಮುಂದೆ ಬಪ್ಪರ ಕಾಣ | ಬಂದರೆ ಬಾರೆಂದೆನರ್ಪ ಗರ್ವಿಯಾ | ದಂದುಗನೆ ಬೇಡ ಸರ್ವಜ್ಞ ||
ಅಂಬಲೂರೊಳಗೆಸೆವ | ಕುಂಬಾರಸಾಲೆಯಲಿ ಇಂದಿನ | ಕಳೆಯ | ಮಾಳಿಯೊಳು - ಬಸವರಸ ನಿಂಬಿಟ್ಟನೆನ್ನ ಸರ್ವಜ್ಞ
ಅಂಬು ಬಿಲ್ಲಿಗೆ ಲೇಸು | ಇಂಬು ಕೋಣೆಗೆ ಲೇಸು | ಸಂಬಾರ ಲೇಸು ಸಾರಿಗಂ ಊರಿಂಗೆ | ಕುಂಬಾರ ಲೇಸು ಸರ್ವಜ್ಞ ||
ಅಂಬುದಿಯ ಗಾಢವನು | ಅಂಬರದ ಕಲಹವನು | ಶಂಭುವಿನ ಮಹಿಮೆ ಸತಿಯರಾ ಹೃದಯದಾ ಇಂಭರಿದವರಾರು ಸರ್ವಜ್ಞ ||