ಪ್ರಾರಂಭ ಪದದ ಹುಡುಕು
ರತಿ ಕಲೆಯೊಳತಿಚದುರೆ | ಮಾತಿನೊಳಗತಿಮಿತಿಯು ಖತಿಗಳೆದ ಮೊಗವು ಸೊಬಗಿನಾ ಸುದತಿ ಕಂ | ಡತಿ ಬಯಸದಿಹರೆ ಸರ್ವಜ್ಞ ||
ರಂಧ್ರ - ಗತಿ - ಆದಿತ್ಯ | ನೊಂದಾಗಿ ಅರ್ಥಿಸುತ | ಅಂದಿನಾ ತಿಥಿಯನೊಡಗೂಡೆ ನಕ್ಷತ್ರ | ಮುಂದೆ ಬಂದಕ್ಕು ಸರ್ವಜ್ಞ ||
ರಸಿಕನಾಡಿದ ಮಾತು | ಶಶಿಯುದಿಸಿ ಬಂದಂತೆ | ರಸಿಕನಲ್ಲದನ ಬರಿಮಾತು ಕಿವಿಯೊಳ್ಕೂರ್ದಸಿಯು ಬಡಿದಂತೆ ಸರ್ವಜ್ಞ ||
ರಾಗ ಯೋಗಿಗೆ ಹೊಲ್ಲ | ಭೋಗ ರೋಗಿಗೆ ಹೊಲ್ಲ | ಓಗರವು ಎಣ್ಣೆ - ಉಣಹೊಲ್ಲ ಪರನಿಂದೆ | ಆಗಲುಂ ಹೊಲ್ಲ ಸರ್ವಜ್ಞ ||
ರಾಗವೇ ಮೂಡಲು | ಯೋಗವೇ ಬಡಗಲ ರೋಗವೇ ಶುದ್ಧ ಪಡುವಲದು ತೆಂಕಲೇ | ಭೋಗದಾಬೀಡು ಸರ್ವಜ್ಞ ||
ರಾಗಿಯನ್ನು ಉಂಬುವ ನಿ | ರೋಗಿ ಎಂದೆನಿಸುವನು | ರಾಗಿಯು ಭೋಗಿಗಳಿಗಲ್ಲ ಬಡವರಿಂ | ಗಾಗಿ ಬೆಳೆದಿಹುದು ಸರ್ವಜ್ಞ ||
ರಾತ್ರಿಯೊಳು ಶಿವರಾತ್ರಿ | ಜಾತ್ರೆಯೊಳು ಶ್ರ್‍ಈಶೈಲ | ಕ್ಷೇತ್ರದೊಳಗಧಿಕ ಶ್ರೀಕಾಶಿ ಶಿವತತ್ವ | ಸ್ತೋತ್ರದೊಳಗಧಿಕ ಸರ್ವಜ್ಞ ||
ರಾಮನಾಮವೆ ನಾಮ | ಸೋಮ ಶಂಕರ ಗುರುವು ಆ ಮಹಾರುದ್ರ ಅಧಿದೈವ ಜಗದೊಳಗೆ | ಭೀಮನೇ ಭಕ್ತ ಸರ್ವಜ್ಞ ||
ರುಚಿಗಳಿಗೆ ನೆರೆಗಳೆದು | ಶುಚಿಗಲಿ ಮೆರೆವಂಗೆ ಪಚನವದು ಬೆಳಗಿ ಬಲದಿ ಬಾಳುವನೆಂಬಿ | ವಚನವೊಂದಿಹುದು ಸರ್ವಜ್ಞ ||
ರುದ್ರಕರ್ತನು ತಾನು | ಅರ್ಧನಾರಿಯು ಆದ ಇದ್ದವರೊಳಾರು ಸತಿಯರಾ ಹೃದಯವನು | ಗೆದ್ದವನು ಆರು ಸರ್ವಜ್ಞ ||
ರುದ್ರಾಕ್ಷಿಯ ಮಾಲೆಯ | ಭದ್ರದಲಿ ಧರಿಸಿದಗೆ ಹೊದ್ದಿರ್‍ದ ಪಾಪ ಹೋಗಲವ ಸಾಕ್ಷಾತ | ಮಾಲೆಯ ರುದ್ರನೇ ಸರ್ವಜ್ಞ ||