ಒಟ್ಟು 13 ಕಡೆಗಳಲ್ಲಿ , 1 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಡಿ ಹುಸಿಯಲು ಹೊಲ್ಲ | ಕೂಡಿ ತಪ್ಪಲು ಹೊಲ್ಲ | ಕಾಡುವಾ ನೆಂಟ ಬರ ಹೊಲ್ಲ ಸಟಿಯ | ನಾಡುವನೆ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಆದಿಯಲಿ ಜಿನನಿಲ್ಲ | ವೇದದಲಿ ಹುಸಿಯಿಲ್ಲ | ವಾದದಿಂದಾವ ಧನವಿಲ್ಲ ಸ್ವರ್ಗದಿ | ಮಾದಿಗರೆ ಇಲ್ಲ ಸರ್ವಜ್ಞ ||
--------------
ಸರ್ವಜ್ಞ
ಕುಂದಳಿದವ ದೈವ | ಬಂಧ ಕಳೆದವ ದೈವ | ನೊಂದು ತಾ ನೋಯಿಸದವ ದೈವ ಹುಸಿಯದನೆ | ಇಂದುಧರನೆಂದ ಸರ್ವಜ್ಞ ||
--------------
ಸರ್ವಜ್ಞ
ತತ್ವಮಸಿ ಹುಸಿದಿಹರೆ | ಮುತ್ತೊಡೆದು ಬೆಸದಿಹರೆ | ಉತ್ತಮರು ಕೆಡಕ ಕಲಿಸಿದರೆ ಲೋಕ ತಾ | ನೆತ್ತ ಸಾಗುವದು ಸರ್ವಜ್ಞ ||
--------------
ಸರ್ವಜ್ಞ
ಸತ್ಯರೂ ಹುಸಿಯುವಡೆ | ಒತ್ತಿ ಹರಿದರೆ ಶರಧಿ | ಉತ್ತಮರು ಕೇಡಬಗೆದಿಹರೆ ಲೋಕವಿನ್ನೆತ್ತ| ಸಾಗುವದು ಸರ್ವಜ್ಞ ||
--------------
ಸರ್ವಜ್ಞ
ಸಾಲ ಬಡವಂಗೆ ಹೊಲ್ಲ | ನಾಲಗೆಗೆ ಹುಸಿ ಹೊಲ್ಲ | ಹಾಲಿನಾ ಕೊಡಕೆ ಹುಳಿಹೊಲ್ಲ ಕಾಲಿಗಂ | ಕೋಲಿ ಹೊಲ್ಲೆಂದ ಸರ್ವಜ್ಞ ||
--------------
ಸರ್ವಜ್ಞ
ಹಸಿಯ ಅಲ್ಲವು ಲೇಸು | ಬಿಳಿಯ ಪಳಿಯು ಲೇಸು ಹುಸಿ ಲೇಸು ಕಳ್ಳಹೆಣ್ಣಿಗೆ | ಬೈಗಿನಾ ಬಿಸಿಲು ಲೇಸೆಂದ ಸರ್ವಜ್ಞ ||
--------------
ಸರ್ವಜ್ಞ
ಹಾಲಿನಾ ಹಸು ಲೇಸು | ಶೀಲದಾ ಶಿಶು ಲೇಸು ಬಾಲೆ | ಸಜ್ಜನೆಯ ಬಲು ಲೇಸು ಹುಸಿಯದಾ | ನಾಲಿಗೆಯು ಲೇಸು ಸರ್ವಜ್ಞ ||
--------------
ಸರ್ವಜ್ಞ
ಹುಸಿಯ ಪೇಳ್ವುದರಿಂದ | ಹಸಿದು ಸಾವುದು ಲೇಸು | ಹುಸಿದು ಮೆರೆಯುವನ ಬದುಕಿಂದ ಹಂದಿಯಾ | ಇಸಿಯು ಲೇಸೆಂದ ಸರ್ವಜ್ಞ ||
--------------
ಸರ್ವಜ್ಞ
ಹುಸಿವನ ಬೇಹಾರ | ಕಸ ಹತ್ತಿದಾರಂಬ ವಿಷಯ ಉಳ್ಳವನ ಗುರುತನ - ಇವು ಮೂರು ಮಸಿವಣ್ಣ ಕಂಡ ಸರ್ವಜ್ಞ
--------------
ಸರ್ವಜ್ಞ
ಹುಸಿವನಿಂದೈನೂರು | ಪಶುವ ಕೊಂದವ ಲೇಸು | ಶಿಶು ವಧೆಯಮಾಡಿದವ ಲೇಸು ಮರೆಯಲಿ | ದ್ದೆಸೆದರೂ ಲೇಸು ಸರ್ವಜ್ಞ ||
--------------
ಸರ್ವಜ್ಞ
ಹುಸಿವಾತ ದೇಗುಲದ | ದೆಸೆಯತ್ತ ಮುಂತಾಗಿ | ನೊಸಲೆತ್ತಿ ಕರವ ಮುಗಿದಿಹರೆ | ಅಷ್ಟುದ್ದ ಹರಿವನೆಂದರಿಗು ಸರ್ವಜ್ಞ ||
--------------
ಸರ್ವಜ್ಞ