ಒಟ್ಟು 5 ಕಡೆಗಳಲ್ಲಿ , 1 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇತ್ತುದನು ಈಯದನ | ಮೃತ್ಯುವೊಯ್ಯುದೆ ಬಿಡದು ಹತ್ತಿರ್ದ ಲಕ್ಷ್ಮಿ ತೊಲಗಿ ಹುಟ್ಟುವನವನ | ತೊತ್ತಾಗಿ ಮುಂದೆ ಸರ್ವಜ್ಞ ||
--------------
ಸರ್ವಜ್ಞ
ತಿಟ್ಟಿಯೊಳು ತೆವರದೊಳು | ಹುಟ್ಟಿಹನೆ ಪರಶಿವನು | ಹುಟ್ಟು ಸಾವುಗಳು ಅವಗಿಲ್ಲ ಜಗವನ್ನು | ಬಿಟ್ಟಿಹನು ನೋಡು ಸರ್ವಜ್ಞ ||
--------------
ಸರ್ವಜ್ಞ
ಬಟ್ಟಲದ ಬಾಯಂತೆ | ಹುಟ್ಟುವದು ಲೋಕದೊಳು | ಮುಟ್ಟದದು ತನ್ನ ಹೆಂಡಿರನು ಕವಿಗಳಲಿ | ದಿಟ್ಟರಿದ ಪೇಳಿ ಸರ್ವಜ್ಞ ||
--------------
ಸರ್ವಜ್ಞ
ಮುಟ್ಟಾದ ಹೊಲೆಯೊಳಗೆ | ಹುಟ್ಟುವುದು ಜಗವೆಲ್ಲ | ಮುಟ್ಟಬೇಡೆಂದ ತೊಲಗುವಾ ಹಾರುವನು | ಹುಟ್ಟಿರುವನೆಲ್ಲಿ ಸರ್ವಜ್ಞ ||
--------------
ಸರ್ವಜ್ಞ
ಹೊಟ್ಟೆಗುಣ ಕೊಟ್ಟವಗೆ | ಸಿಟ್ಟು ನೆರೆ ಬಿಟ್ಟವಗೆ | ಬಟ್ಟೆಯಾ ಮುಳ್ಳು ಸುಟ್ಟವಗೆ ಬಹು ಭವದ | ಹುಟ್ಟು ತಾನಿಲ್ಲ ಸರ್ವಜ್ಞ ||
--------------
ಸರ್ವಜ್ಞ