ಒಟ್ಟು 11 ಕಡೆಗಳಲ್ಲಿ , 1 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಜಲೆಂಜಲು ಎಂದು | ಅಂಜುವರು ಹಾರುವರು | ಎಂಜಲಿಂದಾದ ತನುವಿರಲು ಅದನರಿದು | ಅಂಜಿತಿಹರೇಕೆ ಸರ್ವಜ್ಞ ||
--------------
ಸರ್ವಜ್ಞ
ಕೊಟ್ಟವರ ತಲೆಬೆನ್ನ | ತಟ್ಟುವರು ಹಾರುವರು | ಕೊಟ್ಟೊಡನೆ ಕುಟ್ಟಿ ಕೆಡಹುವರು ಹಾರುವರ | ಬಟ್ಟೆ ಬೇಡೆಂದ ಸರ್ವಜ್ಞ ||
--------------
ಸರ್ವಜ್ಞ
ಕೊಟ್ಟಿಹರೆ ಹಾರುವರು | ಕುಟ್ಟುವರು ಅವರಂತೆ | ಬಿಟ್ಟಿರದ ನೋಡಿ ನುಡಿಸರಾ ಹಾರುವರು | ನೆಟ್ಟನೆಯವರೇ ಸರ್ವಜ್ಞ ||
--------------
ಸರ್ವಜ್ಞ
ಬಂಡುಣಿಗಳಂತಿಹರು | ಭಂಡನೆರೆ ಯಾಡುವರು ಕಂಡುದನು ಅರಿದು ನುಡಿಯರಾ ಹಾರುವರು | ಭಂಡರೆಂದರಿಗು ಸರ್ವಜ್ಞ ||
--------------
ಸರ್ವಜ್ಞ
ಮಲವು ದೇಹದಿ ಸೋರಿ | ಹೊಲಸು ಮಾಂಸದಿ ನಾರಿ | ಹೊಲೆ ವಿಲದ ಹೇಯ ದೇಹದಲಿ ಹಾರುವರು | ಕುಲವನೆಣಿಸುವರೆ ಸರ್ವಜ್ಞ ||
--------------
ಸರ್ವಜ್ಞ
ಹಾರುವರು ಎಂಬವರು | ಹಾರುವರು ನರಕಕ್ಕೆ | ಸಾರದ ನಿಜವನರಿಯದಿರೆ ಸ್ವರ್ಗದಾ | ದಾರಿಯ ಮಾರ್ಗಹುದೆ ಸರ್ವಜ್ಞ ||
--------------
ಸರ್ವಜ್ಞ
ಹಾರುವರು ಎಂಬುವರು | ಏರಿಹರು ಗಗನಕ್ಕೆ | ಹಾರುವರ ಮೀರಿದವರಿಲ್ಲ ಅವರೊಡನೆ | ವೈರಬೇಡೆಂದ ಸರ್ವಜ್ಞ ||
--------------
ಸರ್ವಜ್ಞ
ಹಾರುವರು ಎಂಬುವರು | ಹಾರುತ್ತಲಿರುತಿಹರು | ಹಾರುವಗೆ ಸಲುಹುವರ ದೊರೆಯೊಡನೆ ನಿಜಗುಣ | ತೋರದಡುಗುವದು ಸರ್ವಜ್ಞ ||
--------------
ಸರ್ವಜ್ಞ
ಹಾರುವರು ಸ್ವರ್ಗದ | ದಾರಿಯನು ಬಲ್ಲರೇ | ನಾರಿ ಪತಿವ್ರತದಿ ನಡೆಯೆ ಸ್ವರ್ಗದಾ | ದಾರಿ ತೋರುವಳು ಸರ್ವಜ್ಞ ||
--------------
ಸರ್ವಜ್ಞ