ಒಟ್ಟು 6 ಕಡೆಗಳಲ್ಲಿ , 1 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಟ್ಟರಿ ಅದರ ಘನ | ಸುಟ್ಟರೂ ಕುಂಟಣಿ ಘನ | ಇಟ್ಟಗೆಯ ಮೂಗನರಿದರೂ ಮೂರುಭವ | ಕಟ್ಟು ಕೂಡುವವು ಸರ್ವಜ್ಞ ||
--------------
ಸರ್ವಜ್ಞ
ಅಟ್ಟುಂಬುದು ಮೂಡಲದು | ಸುಟ್ಟುಂಬುದು ಬಡಗಲದು | ತಟ್ಟೆಯಲುಂಬುದು ಪಡುವಲದು ತೆಂಕಲು | ಮುಷ್ಟಿಲುಂಬು ಸರ್ವಜ್ಞ ||
--------------
ಸರ್ವಜ್ಞ
ಗಂಧವನು ಇಟ್ಟಮೆ ಲಂದದಲಿ ಇರಬೇಕು | ನಿಂದೆ ಕುಂದುಗಳ ಸುಟ್ಟವನು ಧರಣಿಯಲಿ | ಇಂದುಧರನೆಂದ ಸರ್ವಜ್ಞ ||
--------------
ಸರ್ವಜ್ಞ
ಸುಟ್ಟ ಬೆಳಸಿಯು ಲೇಸು | ಅಟ್ಟ ಬೊನವು ಲೇಸು | ಕಟ್ಟಾಣೆ ಸತಿಯು ಇರಲೇಸು ನಡುವಿಂಗೆ | ದಟ್ಟಿ ಲೇಸೆಂದ ಸರ್ವಜ್ಞ ||
--------------
ಸರ್ವಜ್ಞ
ಸುಟ್ಟೊಲೆಯು ಬಿಡದೆ ತಾ | ನಟ್ಟ ಮೇಲುರಿದಂತೆ | ಕೊಟ್ಟಮೇಲುರಿವ ನಳಿಯನೆಂಬೀ ಮಾತು | ಕಟ್ಟಿ ಇಟ್ಟಂತೆ ಸರ್ವಜ್ಞ ||
--------------
ಸರ್ವಜ್ಞ
ಹೊಟ್ಟೆಗುಣ ಕೊಟ್ಟವಗೆ | ಸಿಟ್ಟು ನೆರೆ ಬಿಟ್ಟವಗೆ | ಬಟ್ಟೆಯಾ ಮುಳ್ಳು ಸುಟ್ಟವಗೆ ಬಹು ಭವದ | ಹುಟ್ಟು ತಾನಿಲ್ಲ ಸರ್ವಜ್ಞ ||
--------------
ಸರ್ವಜ್ಞ