ಒಟ್ಟು 13 ಕಡೆಗಳಲ್ಲಿ , 1 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿತಂಗೆ ಅರವತ್ತು | ಮರೆತಂಗೆ ಮೂವತ್ತು | ಬರೆವಂಗೆ ರಾಜ್ಯ ಸರಿಪಾಲು | ಹಾರುವನು | ಬರೆಯದೇ ಕೆಟ್ಟ ಸರ್ವಜ್ಞ ||
--------------
ಸರ್ವಜ್ಞ
ಅರೆದಲೆಯು ಮೂಡಲು ಹೊರದಲೆಯು ಬಡಗಲೂ | ಸರಿಯಲೆಯು ಉದ್ದ ಪಡುವಲುಂ ತೆಂಗಣದಿ | ಬರಿದಲೆಯಲಿಹರು ಸರ್ವಜ್ಞ ||
--------------
ಸರ್ವಜ್ಞ
ಕರಿಗೆ ಕೇಸರಿ ವೈರಿ | ದುರಿತಕ್ಕೆ ಹರ ವೈರಿ | ಉರವಣಿಸಿ ಬರುವ ಸಂಸಾರದ ದುಃಖಕ್ಕೆ | ಪರಿಣಾಮ ವೈರಿ ಸರ್ವಜ್ಞ ||
--------------
ಸರ್ವಜ್ಞ
ತಳಿಗೆಗಂ ತಲೆಯಿಲ್ಲ | ಮಳೆಗೆ ಜೋಯಿಸರಿಲ್ಲ | ಬೆಳಗಾಗೆ ಕನ್ನಗಳವಿಲ್ಲ ಲೋಕದೊಳು | ಉಳಿದಾಳ್ಗಳಿಲ್ಲ ಸರ್ವಜ್ಞ ||
--------------
ಸರ್ವಜ್ಞ
ನರಹರಿಯ ಕೊಲುವಂದು | ಎರಳೆಯನೆಸುವಂದು ಮರಳಿ ವರಗಳನು ಕೊಡುವಂದು - ಸ್ಮರಹರೆಗೆ ಸರಿಯಾರ ಕಾಣೆ ಸರ್ವಜ್ಞ
--------------
ಸರ್ವಜ್ಞ
ಪರಮನೈಮೊಗ ಉಳಿದು | ನೆರವಿಯನೊಲ್ಲದೆ ನರರೊಪ ಧರಿಸಿ ಗುರುವಾಗಿ - ಬೋಧಿಪಗೆ ಸರಿ ಯಾರ ಕಾಣೆ ಸರ್ವಜ್ಞ
--------------
ಸರ್ವಜ್ಞ
ಮೇರುವಿಂಗೆಣೆಯಿಲ್ಲ | ಧಾರುಣಿಕೆ ಸರಿಯಿಲ್ಲ | ತಾರಕೆನಿಗಿಂತ ಹಿತರಿಲ್ಲ ದೈವತಾ | ಬೇರೊಬ್ಬನಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಶೇಷಿನಿಂ ಬಲರಿಲ್ಲ | ಮೋಸದಿಂ | ನೇಸರಿಂ ಜಗಕ ಹಿತರಿಲ್ಲ | ಪರದೈವ | ಈಶನಿಂದಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಸತ್ಯಕ್ಕೆ ಸರಿಯಿಲ್ಲ | ಚಿತ್ತಕ್ಕೆ ಸ್ಥಿರವಿಲ್ಲ | ಹಸ್ತದಿಂದಧಿಕಹಿತರಿಲ್ಲ ಪರದೈವ | ನಿತ್ಯನಿಂದಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಸತ್ಯಕ್ಕೆ ಸರಿಯಿಲ್ಲ | ಮಿಥ್ಯಕ್ಕೆ ನೆಲೆಯಿಲ್ಲ | ಹೆತ್ತಮ್ಮನಿಂದ ಹಿತರಿಲ್ಲ ನರರೊಳಗೆ | ನಿತ್ಯರೇ ಇಲ್ಲ ಸರ್ವಜ್ಞ ||
--------------
ಸರ್ವಜ್ಞ
ಹರಿಬ್ರಹ್ಮರೆಂಬವರು | ಹರನಿಂದಲಾದವರು ಅರಸಿಂಗೆ ಆಳು ಸರಿಯಹನೆ - ಪಶುಪತಿಗೆ ಸರಿ ಯಾರ ಕಾಣೆ ಸರ್ವಜ್ಞ
--------------
ಸರ್ವಜ್ಞ
ಹಿರಿಯ ಬೊಮ್ಮನು ಕೆಂಚ | ಹಿರಿಯ ಹರಿ ತಾ ಕರಿಕ ಪುರಹರನು ಶುದ್ಧ ಧವಳಿತನು - ಇರೆ ಬೇರೆ ಹರಗೆ ಸರಿಯಹರೀ ಸರ್ವಜ್ಞ
--------------
ಸರ್ವಜ್ಞ