ಒಟ್ಟು 7 ಕಡೆಗಳಲ್ಲಿ , 1 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉರಗನಾ ಮುಖದಲ್ಲಿ | ಇರುತಿಪ್ಪ ಕಪ್ಪೆ ತಾ | ನೆರಗುವಾ ನೊಣಕೆ ಹರಿದಂತೆ ಸಂಸಾರ | ದಿರವು ಕಾಣಯ್ಯ ಸರ್ವಜ್ಞ ||
--------------
ಸರ್ವಜ್ಞ
ಕರಿಗೆ ಕೇಸರಿ ವೈರಿ | ದುರಿತಕ್ಕೆ ಹರ ವೈರಿ | ಉರವಣಿಸಿ ಬರುವ ಸಂಸಾರದ ದುಃಖಕ್ಕೆ | ಪರಿಣಾಮ ವೈರಿ ಸರ್ವಜ್ಞ ||
--------------
ಸರ್ವಜ್ಞ
ಕೋಡಗನ ಒಡನಾಟ | ಕೇಡಕ್ಕು ಸಂಸಾರ | ಕಾದಾಡಿ ಕೆಂಪು ಮಾಣಿಕವ ಕಲ್ಲೆಂದು | ಈಡಾಡಿದಂತೆ ಸರ್ವಜ್ಞ ||
--------------
ಸರ್ವಜ್ಞ
ಜೊಳ್ಳು ಮನುಜರು ತಾವು | ಸುಳ್ಳು ಸಂಸಾರದೊಳು ಮಳ್ಳಿಡಿದು ಮಾಯೆಯೆಂಬವಳ ಬಲೆಯೊಳಗೆ | ಹೊರಳಾಡುತಿಹರು ಸರ್ವಜ್ಞ ||
--------------
ಸರ್ವಜ್ಞ
ತಾಪದ ಸಂಸಾರ | ಕೊಪದಲಿ ಬಿಳ್ದವರು ಆಪತ್ತನುಳಿದು ಪೊರಮಡಲು - ಗುರುಪಾದ ಸೋಪಾನ ಕಂಡು ಸರ್ವಜ್ಞ
--------------
ಸರ್ವಜ್ಞ
ಪರುಷ ಕಬ್ಬುನದೆಸೆವ | ಕರಡಿಗೆಯೊಳಡರುವದೆ | ಹರ ಭಕ್ತಿಯಿಳ್ಳ ಮಹಿಮೆ ಸಂಸಾರದೊಳು | ಎರಕವಾಗಿಹನೆ ಸರ್ವಜ್ಞ ||
--------------
ಸರ್ವಜ್ಞ
ಸಿರಿಯ ಸಂಸಾರವು | ಸ್ಥಿರವೆಂದು ನಂಬದಿರು | ಹಿರಿದೊಂದು ಸಂತೆ ನೆರೆದೊಂದು ಜಾವಕ್ಕೆ | ಹರಿದು ಹೋದಂತೆ ಸರ್ವಜ್ಞ ||
--------------
ಸರ್ವಜ್ಞ