ಒಟ್ಟು 7 ಕಡೆಗಳಲ್ಲಿ , 1 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಆಡಾದನಾ ಅಜನು | ಕೊಡಗನದಾದನು ಹರಿಯು ನೋಡಿದರೆ ಶಿವನು ನರಿಯಾದನೀ ಬೆಡಗೆ ರೂಢಿಯೊಳು ಬಲ್ಲೆ ಸರ್ವಜ್ಞ ||
ಆನೆ ಕನ್ನಡಿಯಲ್ಲಿ | ತಾನಡಗಿ ಇಪ್ಪಂತೆ | ಜ್ಞಾನವುಳ್ಳವರ ಹೃದಯದಲಿ ಪರಶಿವನು | ತಾನಡಗಿ ಇಹನು ಸರ್ವಜ್ಞ ||
ಆವ ಕಾಲವು ವನದಿ | ಜೀವಕಾಲದ ಕಳೆದು | ಜೀವಚಯದಲ್ಲಿ ದಯವಿಲ್ಲದಿರುವವನ | ಕಾಯ್ವ ಶಿವನು ಸರ್ವಜ್ಞ ||
ಕ್ಷೀರದಲಿ ಘ್ರತ ವಿಮಲ | ನೀರಿನೊಳು ಶಿಖಿಯಿರ್ದು ಅರಿಗೂ ತೋರದಿರದಂತೆ ಎನ್ನೊಳಗೆ | ಸೇರಿಹನು ಶಿವನು ಸರ್ವಜ್ಞ ||
ತಿಟ್ಟಿಯೊಳು ತೆವರದೊಳು | ಹುಟ್ಟಿಹನೆ ಪರಶಿವನು | ಹುಟ್ಟು ಸಾವುಗಳು ಅವಗಿಲ್ಲ ಜಗವನ್ನು | ಬಿಟ್ಟಿಹನು ನೋಡು ಸರ್ವಜ್ಞ ||
ಪವನಪರಿಯರಿದಂಗೆ | ಶಿವನ ಸಾಧಿಸಲಕ್ಕು | ಭವಮಾಲೆ ಹರಿದು ಸುಖಿಸುವೊಡೆ ಅವ ಸದಾಶಿವನು ತಾನಕ್ಕು ಸರ್ವಜ್ಞ ||
ಹರಿಯ ಉರವನು ಮೆಟ್ಟಿ | ಹರಶಿವನು ಏರಿ ಸರಸಿಜೋದ್ಭವನ ಮೊಗಗೆಡಿಸಿ ಮೀರಿದಳು | ಹಿರಿಯರಿನ್ನಾರು ಸರ್ವಜ್ಞ ||