ಒಟ್ಟು 37 ಕಡೆಗಳಲ್ಲಿ , 1 ವಚನಕಾರರು , 34 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಡವಿಯಲಿ ತಪದಲ್ಲಿ | ದೃಢತನದೊಳಿದ್ದರೂ| ನುಡಿಯಲ್ಲಿ ಶಿವನ ಮರೆಯುವಡೆ ಗುಡವಿಲ್ಲ | ದಡಗೆಯುಂಡಂತೆ ಸರ್ವಜ್ಞ ||
--------------
ಸರ್ವಜ್ಞ
ಆಗುಹೋಗುಗಳ ನೆರೆ | ರಾಗ ಭೋಗಗಳು | ಸ-ರಾಗವಾಗಿಕ್ಕು ಶಿವನೊಲಿದೊಡಲ್ಲದಿರೆ | ಹೋಗಿಕ್ಕು ಕಾಣೊ ಸರ್ವಜ್ಞ ||
--------------
ಸರ್ವಜ್ಞ
ಆಡಾದನಾ ಅಜನು | ಕೊಡಗನದಾದನು ಹರಿಯು ನೋಡಿದರೆ ಶಿವನು ನರಿಯಾದನೀ ಬೆಡಗೆ ರೂಢಿಯೊಳು ಬಲ್ಲೆ ಸರ್ವಜ್ಞ ||
--------------
ಸರ್ವಜ್ಞ
ಆನೆ ಕನ್ನಡಿಯಲ್ಲಿ | ತಾನಡಗಿ ಇಪ್ಪಂತೆ | ಜ್ಞಾನವುಳ್ಳವರ ಹೃದಯದಲಿ ಪರಶಿವನು | ತಾನಡಗಿ ಇಹನು ಸರ್ವಜ್ಞ ||
--------------
ಸರ್ವಜ್ಞ
ಆವ ಕಾಲವು ವನದಿ | ಜೀವಕಾಲದ ಕಳೆದು | ಜೀವಚಯದಲ್ಲಿ ದಯವಿಲ್ಲದಿರುವವನ | ಕಾಯ್ವ ಶಿವನು ಸರ್ವಜ್ಞ ||
--------------
ಸರ್ವಜ್ಞ
ಆವಾವ ಜೀವವನು | ಹೇವವಿಲ್ಲದೆ ಕೊಂದು | ಸಾವಾಗ ಶಿವನ ನೆನೆಯುವಡೆ | ಅವ ಬಂದು | ಕಾವನೇ ಹೇಳು ಸರ್ವಜ್ಞ ||
--------------
ಸರ್ವಜ್ಞ
ಎಲ್ಲರನು ಬೇಡಿ | ಹಲ್ಲು ಬಾಯಾರುವು ದೆ ಬಲ್ಲಂತೆ ಶಿವನ ಭಜಿಸಿದೊಡೆ - ಶಿವ ದಾನಿ ಇಲ್ಲನ್ನಲರೆಯ ಸರ್ವಜ್ಞ
--------------
ಸರ್ವಜ್ಞ
ಎಲ್ಲರೂ ಶಿವನೆಂದ | ರೆಲ್ಲಿಹುದು ಭಯವಯ್ಯಾ | ಎಲ್ಲರೂ ಶಿವನ ನೆನೆಯುವಡೆ ಕೈಲಾಸ | ಎಲ್ಲಿಯೇ ಇಹುದು ಸರ್ವಜ್ಞ ||
--------------
ಸರ್ವಜ್ಞ
ಎಲ್ಲರೂ ಶಿವನೆಂದಿರಿಲ್ಲಿಯೇ ಹಾಳಕ್ಕು | ಎಲ್ಲರೂ ಶಿವನ ಮರೆದಿಹರೆ ಕೈಲಾಸ | ದಲ್ಲಿ ಹಾಳಕ್ಕು ಸರ್ವಜ್ಞ ||
--------------
ಸರ್ವಜ್ಞ
ಎಲ್ಲವರು ಬಯ್ದರೂ | ಕಲ್ಲು ಕೊಂಡೊಗೆದರೂ | ಅಲ್ಲದಾ ಮಾತು ನುಡಿದರೂ ಶಿವನಲ್ಲಿ | ತಲ್ಲಣಿಸು ಬೇಡ ಸರ್ವಜ್ಞ ||
--------------
ಸರ್ವಜ್ಞ
ಕಂಡವರು ಕೆರಳುವರು | ಹೆಂಡತಿಯು ಕನಲುವಳು | ಖಂಡಿತದ ಲಕ್ಶ್ಮಿ ತೊಲಗುವಳು ಶಿವನೊಲುಮೆ | ಕಂಡಕೊಳ್ದಿರಕು ಸರ್ವಜ್ಞ ||
--------------
ಸರ್ವಜ್ಞ
ಕಲ್ಲಿನಲಿ ಮಣ್ಣಿನಲಿ | ಮುಳ್ಳಿನಾ ಮೊನಯಲಿ ಎಲ್ಲ ನೆನೆದಲ್ಲಿ ಶಿವನಿರ್ಪ ಅವನೀ | ನಿದ್ದಲ್ಲಿಯೇ ಇರ್ಪ ಸರ್ವಜ್ಞ ||
--------------
ಸರ್ವಜ್ಞ
ಕುಲಗೆಟ್ಟವರ ಚಿಂತೆ | ಯೊಳಗಿರ್ಪರಂತೆಲ್ಲ ಕುಲಗೆಟ್ಟು ಶಿವನ ಮರೆಹೊಕ್ಕೆ - ಋಷಿಗಳು ಕುಲಗೋತ್ರರುಗಳು ಸರ್ವಜ್ಞ
--------------
ಸರ್ವಜ್ಞ
ಕ್ಷೀರದಲಿ ಘ್ರತ ವಿಮಲ | ನೀರಿನೊಳು ಶಿಖಿಯಿರ್ದು ಅರಿಗೂ ತೋರದಿರದಂತೆ ಎನ್ನೊಳಗೆ | ಸೇರಿಹನು ಶಿವನು ಸರ್ವಜ್ಞ ||
--------------
ಸರ್ವಜ್ಞ
ಖುಲ್ಲ ಮಾನವ ಬೇಡಿ | ಕಲ್ಲುತಾ ಕೊಡುವದೇ | ಸೊಲ್ಲರಿವ ಶಿವನ ಬೇಡಿದಡೆ ಬಯಸಿದುದು | ನೆಲ್ಲವನು ಕೊಡುವ ಸರ್ವಜ್ಞ ||
--------------
ಸರ್ವಜ್ಞ