ಒಟ್ಟು 86 ಕಡೆಗಳಲ್ಲಿ , 1 ವಚನಕಾರರು , 77 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅಡವಿಯಲಿ ತಪದಲ್ಲಿ | ದೃಢತನದೊಳಿದ್ದರೂ| ನುಡಿಯಲ್ಲಿ ಶಿವನ ಮರೆಯುವಡೆ ಗುಡವಿಲ್ಲ | ದಡಗೆಯುಂಡಂತೆ ಸರ್ವಜ್ಞ ||
ಆಗುಹೋಗುಗಳ ನೆರೆ | ರಾಗ ಭೋಗಗಳು | ಸ-ರಾಗವಾಗಿಕ್ಕು ಶಿವನೊಲಿದೊಡಲ್ಲದಿರೆ | ಹೋಗಿಕ್ಕು ಕಾಣೊ ಸರ್ವಜ್ಞ ||
ಆಡಾದನಾ ಅಜನು | ಕೊಡಗನದಾದನು ಹರಿಯು ನೋಡಿದರೆ ಶಿವನು ನರಿಯಾದನೀ ಬೆಡಗೆ ರೂಢಿಯೊಳು ಬಲ್ಲೆ ಸರ್ವಜ್ಞ ||
ಆನೆ ಕನ್ನಡಿಯಲ್ಲಿ | ತಾನಡಗಿ ಇಪ್ಪಂತೆ | ಜ್ಞಾನವುಳ್ಳವರ ಹೃದಯದಲಿ ಪರಶಿವನು | ತಾನಡಗಿ ಇಹನು ಸರ್ವಜ್ಞ ||
ಆರರಟ್ಟುಗಳಿಗಳನು | ಮೂರು ಕಂಟಕರನ್ನು | ಏರು ಜವ್ವನವ ತಡೆಯುವರೆ ಶಿವ ತಾನು | ಬೇರೆ ಇಲ್ಲೆಂದ ಸರ್ವಜ್ಞ ||
ಆವ ಕಾಲವು ವನದಿ | ಜೀವಕಾಲದ ಕಳೆದು | ಜೀವಚಯದಲ್ಲಿ ದಯವಿಲ್ಲದಿರುವವನ | ಕಾಯ್ವ ಶಿವನು ಸರ್ವಜ್ಞ ||
ಆವಾವ ಜೀವವನು | ಹೇವವಿಲ್ಲದೆ ಕೊಂದು | ಸಾವಾಗ ಶಿವನ ನೆನೆಯುವಡೆ | ಅವ ಬಂದು | ಕಾವನೇ ಹೇಳು ಸರ್ವಜ್ಞ ||
ಆಸನವು ದೃಢವಾಗಿ | ನಾಶಿಕಾಗ್ರದಿ ದಿಟ್ಟು | ಸೂಸವ ಮನವ ಫನದಲಿರಿಸಿದನು ಜಗ | ದೀಶ ತಾನಕ್ಕು ಸರ್ವಜ್ಞ ||
ಈಶ ಭಕ್ತನು ಆಗಿ | ವೇಶಿಯನು ತಾ ಹೋಗೆ | ಸಲಾಗಿರ್ದ ಭೋನವನು ಹಂದಿ ತಾ ಮೂಸಿ ಹೋದಂತೆ ಸರ್ವಜ್ಞ ||
ಉದ್ದಿನಾ ಒಡೆ ಲೇಸು | ಬುದ್ಧಿಯಾ ನುಡಿ ಲೇಸು | ಬಿದ್ದೊಡನೆ ಕಯ್ಗೆ ಬರಲೇಸು ಶಿಶುವಿಂಗೆ | ಮುದ್ದಾಟ ಲೇಸು ಸರ್ವಜ್ಞ ||
ಎಲ್ಲರನು ಬೇಡಿ | ಹಲ್ಲು ಬಾಯಾರುವು ದೆ ಬಲ್ಲಂತೆ ಶಿವನ ಭಜಿಸಿದೊಡೆ - ಶಿವ ದಾನಿ ಇಲ್ಲನ್ನಲರೆಯ ಸರ್ವಜ್ಞ
ಎಲ್ಲರೂ ಶಿವನೆಂದ | ರೆಲ್ಲಿಹುದು ಭಯವಯ್ಯಾ | ಎಲ್ಲರೂ ಶಿವನ ನೆನೆಯುವಡೆ ಕೈಲಾಸ | ಎಲ್ಲಿಯೇ ಇಹುದು ಸರ್ವಜ್ಞ ||
ಎಲ್ಲರೂ ಶಿವನೆಂದಿರಿಲ್ಲಿಯೇ ಹಾಳಕ್ಕು | ಎಲ್ಲರೂ ಶಿವನ ಮರೆದಿಹರೆ ಕೈಲಾಸ | ದಲ್ಲಿ ಹಾಳಕ್ಕು ಸರ್ವಜ್ಞ ||
ಎಲ್ಲವರು ಬಯ್ದರೂ | ಕಲ್ಲು ಕೊಂಡೊಗೆದರೂ | ಅಲ್ಲದಾ ಮಾತು ನುಡಿದರೂ ಶಿವನಲ್ಲಿ | ತಲ್ಲಣಿಸು ಬೇಡ ಸರ್ವಜ್ಞ ||
ಎಳ್ಳು ಗಾಣಿಗಬಲ್ಲ | ಸುಳ್ಳು ಶಿಂಪಿಗ ಬಲ್ಲ | ಕಳ್ಳರನು ಬಲ್ಲ ತಳವಾರ ಬಣಜಿಗನು | ಎಲ್ಲವನು ಬಲ್ಲ ಸರ್ವಜ್ಞ ||