ಒಟ್ಟು 246 ಕಡೆಗಳಲ್ಲಿ , 1 ವಚನಕಾರರು , 200 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಚ್ಚು ಇಲ್ಲದ ಭಂಡಿ | ಮೆಚ್ಚು ಇಲ್ಲದ ದೊರೆಯು | ರಚ್ಚೆಯಲಿ ಇಹನ ಕಿವಿಮಾತು ಎಂದಿಗೂ | ನೆಚ್ಚಬೇಡೆಂದ ಸರ್ವಜ್ಞ ||
--------------
ಸರ್ವಜ್ಞ
ಅಡವಿಯಲಿ ತಪದಲ್ಲಿ | ದೃಢತನದೊಳಿದ್ದರೂ| ನುಡಿಯಲ್ಲಿ ಶಿವನ ಮರೆಯುವಡೆ ಗುಡವಿಲ್ಲ | ದಡಗೆಯುಂಡಂತೆ ಸರ್ವಜ್ಞ ||
--------------
ಸರ್ವಜ್ಞ
ಅಡಿಕೆ ಹಾಕಿದ ಬಾಯಿ | ಕಟಕವಿಲ್ಲದ ಕಿವಿಯು | ಒಣಕಿನಾ ಮನಿಯು ನಿಲುಕದಾ ಫಲಕೆ ನರಿ
--------------
ಸರ್ವಜ್ಞ
ಅಣುರೇಣುವೃಂದ್ಯದಾ | ಪ್ರಣವದಾ ಬೀಜವನು | ಅಣುವಿನೊಳಗುಣವೆಂದರಿದಾ ಮಹಾತ್ಮನು | ತ್ರಿಣಯನೇ ಅಕ್ಕು ಸರ್ವಜ್ಞ ||
--------------
ಸರ್ವಜ್ಞ
ಅಂಧಕನು ನಿಂದಿರಲು | ಮುಂದೆ ಬಪ್ಪರ ಕಾಣ | ಬಂದರೆ ಬಾರೆಂದೆನರ್ಪ ಗರ್ವಿಯಾ | ದಂದುಗನೆ ಬೇಡ ಸರ್ವಜ್ಞ ||
--------------
ಸರ್ವಜ್ಞ
ಅನ್ನದೇವರ ಮುಂದೆ | ಇನ್ನು ದೇವರು ಉಂಟೆ | ಅನ್ನವಿರುವನಕ ಪ್ರಾಣವೀ ಜಗದೊಳಗೆ | ಅನ್ನದೈವ ಸರ್ವಜ್ಞ ||
--------------
ಸರ್ವಜ್ಞ
ಅಂಬುದಿಯ ಗಾಢವನು | ಅಂಬರದ ಕಲಹವನು | ಶಂಭುವಿನ ಮಹಿಮೆ ಸತಿಯರಾ ಹೃದಯದಾ ಇಂಭರಿದವರಾರು ಸರ್ವಜ್ಞ ||
--------------
ಸರ್ವಜ್ಞ
ಅರಮನೆಯಲಿರುತಿಹುದು | ಕರದಲ್ಲಿ ಬರುತಿಹುದು | ಕೊರೆದು ವಂಶಜರ ತಿನುತಿಹುದು | ಕವಿಗಳಲಿ | ದೊರೆಗಳಿದ ಪೇಳಿ ಸರ್ವಜ್ಞ ||
--------------
ಸರ್ವಜ್ಞ
ಅರಿವಿನಾ ಅರಿವು ತಾ | ಧರಯೊಳಗೆ ಮೆರೆದಿಹುದು | ಅರಿವಿನಾ ಅರಿವಹರಿವಹರಿಹರರು ಬೊಮ್ಮನೂ | ಅರಿಯರೈ ಸರ್ವಜ್ಞಾ ||
--------------
ಸರ್ವಜ್ಞ
ಅರ್ಥಸಿಕ್ಕರೆ ಬಿಡರು | ವ್ಯರ್ಥ ಶ್ರಮಪಡದ ನರ್ಥಕ್ಕೆ ಪರರ ನೂಕಿಪರು ವಿಪ್ರರಿಂ | ಸ್ವಾರ್ಥಿಗಳಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಅವಯವಗಳೆಲ್ಲರಿಗೆ | ಸಮನಾಗಿ ಇರುತಿರಲು | ಭವಿ-ಭಕ್ತ-ಶ್ವಪಚ-ಶೂದ್ರರಿವರಿಂತೆಂಬ | ಕುಲವೆತ್ತಣದು ಸರ್ವಜ್ಞ ||
--------------
ಸರ್ವಜ್ಞ
ಅಷ್ಟದಳಕಮಲದಲಿ | ಕಟ್ಟಿತಿರುಗುವ ಹಂಸ | ಮೆಟ್ಟುವಾ ದಳವ ನಡುವಿರಲಿ ಇರುವದನು | ಮುಟ್ಟುವನೆ ಯೋಗಿ ಸರ್ವಜ್ನ್ಯ ||
--------------
ಸರ್ವಜ್ಞ
ಆಗಿಯ ಹುಣ್ಣಿವೆ ಹೋದ | ಮಿಗೆ ಮೂರ ದಿವಸಕ್ಕೆ | ಮೃಗಧರನ ಕೂಡೆ ಮೃಗವಿರಲು ಮಳೆಗಾಲ | ಜಗದಣಿಯಲಕ್ಕು ಸರ್ವಜ್ಞ ||
--------------
ಸರ್ವಜ್ಞ
ಆಚಾರವಿಹುದೆಂದು | ಲೋಹಗುಂಡಿಗೆ ವಿಡಿದು | ಭೂಚರದಿ ಸತ್ತ ನವಿಲುಗರಿಪಿಡಿದಿರಲು | ನೀಚರೆನಿಸಿರರೆ ಸರ್ವಜ್ಞ ||
--------------
ಸರ್ವಜ್ಞ
ಆದಿಯಲಿ ಜಿನನಿಲ್ಲ | ವೇದದಲಿ ಹುಸಿಯಿಲ್ಲ | ವಾದದಿಂದಾವ ಧನವಿಲ್ಲ ಸ್ವರ್ಗದಿ | ಮಾದಿಗರೆ ಇಲ್ಲ ಸರ್ವಜ್ಞ ||
--------------
ಸರ್ವಜ್ಞ