ಒಟ್ಟು 110 ಕಡೆಗಳಲ್ಲಿ , 1 ವಚನಕಾರರು , 98 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅಂಗಿ ಅರಿವೆಯ ಮಾರಿ | ಭಂಗಿಯನು ತಾ ಸೇದಿ | ಮಂಗನಂದದಲಿ ಕುಣಿವಾತ ಭವ - ಭವದಿ | ಭಂಗಗೊಳುತಿಹನು ಸರ್ವಜ್ಞ ||
ಅಟ್ಟಿಕ್ಕುವಾಕೆಯೊಳು | ಬೆಟ್ಟಿತ್ತು ಹಗೆ ಬೇಡ | ಸಟ್ಟುಗದೆ ಗೋಣ ಮುರಿಯುವಳೂ ಅಲಗಿಲ್ಲ | ದಿಟ್ಟಯಾಳವಳು ಸರ್ವಜ್ಞ ||
ಅರ್ಥಸಿಕ್ಕರೆ ಬಿಡರು | ವ್ಯರ್ಥ ಶ್ರಮಪಡದ ನರ್ಥಕ್ಕೆ ಪರರ ನೂಕಿಪರು ವಿಪ್ರರಿಂ | ಸ್ವಾರ್ಥಿಗಳಿಲ್ಲ ಸರ್ವಜ್ಞ ||
ಅಷ್ಟದಳಕಮಲದಲಿ | ಕಟ್ಟಿತಿರುಗುವ ಹಂಸ | ಮೆಟ್ಟುವಾ ದಳವ ನಡುವಿರಲಿ ಇರುವದನು | ಮುಟ್ಟುವನೆ ಯೋಗಿ ಸರ್ವಜ್ನ್ಯ ||
ಆಗುಹೋಗುಗಳ ನೆರೆ | ರಾಗ ಭೋಗಗಳು | ಸ-ರಾಗವಾಗಿಕ್ಕು ಶಿವನೊಲಿದೊಡಲ್ಲದಿರೆ | ಹೋಗಿಕ್ಕು ಕಾಣೊ ಸರ್ವಜ್ಞ ||
ಆಡಿ ಅಳುಕಲು ಹೊಲ್ಲ | ಕೂಡಿ ತಪ್ಪಲು ಹೊಲ್ಲ | ಕಾಡುವಾ ನೆಂಟ ಬರಹೊಲ್ಲ ಧನಹೀನ | ನಾಡುವದೆ ಹೊಲ್ಲ ಸರ್ವಜ್ಞ ||
ಆಡಿ ಹುಸಿಯಲು ಹೊಲ್ಲ | ಕೂಡಿ ತಪ್ಪಲು ಹೊಲ್ಲ | ಕಾಡುವಾ ನೆಂಟ ಬರ ಹೊಲ್ಲ ಸಟಿಯ | ನಾಡುವನೆ ಹೊಲ್ಲ ಸರ್ವಜ್ಞ ||
ಆದಿಯಲಿ ಜಿನನಿಲ್ಲ | ವೇದದಲಿ ಹುಸಿಯಿಲ್ಲ | ವಾದದಿಂದಾವ ಧನವಿಲ್ಲ ಸ್ವರ್ಗದಿ | ಮಾದಿಗರೆ ಇಲ್ಲ ಸರ್ವಜ್ಞ ||
ಆದಿಯಾ ಮಾಸವನು | ವೇದದಿಂದಲಿ ಗುಣಿಸಿ | ಆ ದಿನದ ತಿಥಿಯನೊಡಿಸಲು ಯೋಗ | ವಾದಿನದ ಬಕ್ಕು ಸರ್ವಜ್ಞ ||
ಆವಾವ ಜೀವವನು | ಹೇವವಿಲ್ಲದೆ ಕೊಂದು | ಸಾವಾಗ ಶಿವನ ನೆನೆಯುವಡೆ | ಅವ ಬಂದು | ಕಾವನೇ ಹೇಳು ಸರ್ವಜ್ಞ ||
ಆಸನವು ದೃಢವಾಗಿ | ನಾಶಿಕಾಗ್ರದಿ ದಿಟ್ಟು | ಸೂಸವ ಮನವ ಫನದಲಿರಿಸಿದನು ಜಗ | ದೀಶ ತಾನಕ್ಕು ಸರ್ವಜ್ಞ ||
ಉಂಡುಂಡು ಕಡೆಕಡೆದು | ಖಂಡೆಯನು ಮಸೆ ಮಸೆದು ಕಂಡವರ ಕಾಲ ಕೆದರುವಾ ದುರುಳರನು | ಗುಂಡಿಲಿಕ್ಕೆಂದ ಸರ್ವಜ್ಞ ||
ಉಣಲಡಿಗೆ ಹಲವಾಗಿ | ಕಣಿಕ ತಾನೊಂದಯ್ಯ ಮಣಲೇಸು ದೈವ ಘನವಾಗಿ - ಲೋಕಕ್ಕೆ ತ್ರಿಣಯನ ಸರ್ವಜ್ಞ
ಉದ್ದರಿಯ ಕೊಟ್ಟಣ್ಣ | ಹದ್ದಾದ ಹಾವಾದ | ಎದ್ದೆದ್ದು ಬರುವ ನಾಯಾದ ಮೈಲಾರ ಗೊಗ್ಗಯ್ಯನಾದ ಸರ್ವಜ್ಞ ||
ಉರಗನಾ ಮುಖದಲ್ಲಿ | ಇರುತಿಪ್ಪ ಕಪ್ಪೆ ತಾ | ನೆರಗುವಾ ನೊಣಕೆ ಹರಿದಂತೆ ಸಂಸಾರ | ದಿರವು ಕಾಣಯ್ಯ ಸರ್ವಜ್ಞ ||