ಒಟ್ಟು 211 ಕಡೆಗಳಲ್ಲಿ , 1 ವಚನಕಾರರು , 143 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಗಸ ಊರಿಗೆ ಲೇಸು | ಸೊಗಸು ಬಾಳುವೆ ಲೇಸು | ಬೊಗಸೆಯುಳ್ಳವರ ಗೆಣೆ ಲೇಸು ಊರಿಂಗೆ | ಅಗಸ ಲೇಸೆಂದ ಸರ್ವಜ್ಞ ||
--------------
ಸರ್ವಜ್ಞ
ಅಂದಿನಾ | ಪುಷ್ಪದತ್ತ || ಬಂದ ವರರುಚಿಯಾಗಿ ಮುಂ ದೇವಸಾಲೆ ಸರ್ವಜ್ಞ - ನೆಂದೆನಿಸಿ ನಿಂದವನು ತಾನೇ ಸರ್ವಜ್ಞ
--------------
ಸರ್ವಜ್ಞ
ಅನ್ನದೇವರ ಮುಂದೆ | ಇನ್ನು ದೇವರು ಉಂಟೆ | ಅನ್ನವಿರುವನಕ ಪ್ರಾಣವೀ ಜಗದೊಳಗೆ | ಅನ್ನದೈವ ಸರ್ವಜ್ಞ ||
--------------
ಸರ್ವಜ್ಞ
ಅಂಬಲೂರೊಳಗೆಸೆವ | ಕುಂಬಾರಸಾಲೆಯಲಿ ಇಂದಿನ | ಕಳೆಯ | ಮಾಳಿಯೊಳು - ಬಸವರಸ ನಿಂಬಿಟ್ಟನೆನ್ನ ಸರ್ವಜ್ಞ
--------------
ಸರ್ವಜ್ಞ
ಅಂಬುದಿಯ ಗಾಢವನು | ಅಂಬರದ ಕಲಹವನು | ಶಂಭುವಿನ ಮಹಿಮೆ ಸತಿಯರಾ ಹೃದಯದಾ ಇಂಭರಿದವರಾರು ಸರ್ವಜ್ಞ ||
--------------
ಸರ್ವಜ್ಞ
ಅರಿತವರ ಮುಂದೆ ತ | ನ್ನರಿವನ್ನು ಮೆರೆಯುವದು | ಅರಿಯದನ ಮುಂದೆ ಮೆರೆದರಾ ಹೊನ್ನೆಂಬ | ತೊರೆಯ ಲೆಚ್ಚಂತೆ ಸರ್ವಜ್ಞ ||
--------------
ಸರ್ವಜ್ಞ
ಅಲ್ಲವರಷಿಣವುಂಟು | ಬೆಲ್ಲ ಬಿಳೆನಲೆಯುಂಟು | ಒಳ್ಳೆ ಹಲಸುಂಟು | ಮೆಲ್ಲಲ್ಕೆ ಮಲೆನಾಡು ನಲ್ಲೆನ್ನ ಬಹುದೇ ಸರ್ವಜ್ಞ ||
--------------
ಸರ್ವಜ್ಞ
ಅವಯವಗಳೆಲ್ಲರಿಗೆ | ಸಮನಾಗಿ ಇರುತಿರಲು | ಭವಿ-ಭಕ್ತ-ಶ್ವಪಚ-ಶೂದ್ರರಿವರಿಂತೆಂಬ | ಕುಲವೆತ್ತಣದು ಸರ್ವಜ್ಞ ||
--------------
ಸರ್ವಜ್ಞ
ಅವರೆಂದರವನು ತಾ | ನವರಂತೆ ಆಗುವನು | ಅವರೆನ್ನದವನು ಜಗದೊಳಗೆ ಬೆಂದಿರ್ದ | ಅವರೆಯಂತಕ್ಕು ಸರ್ವಜ್ಞ ||
--------------
ಸರ್ವಜ್ಞ
ಆಡಿ ನಳ ಕೆಟ್ಟ ಮ | ತ್ತಾಡಿ ಧರ್ಮಜ ಕೆಟ್ಟ | ಕೂಡಿದ ನಾಲ್ವರೂ ತಿರಿದುಂಡರೆ ನೆತ್ತವ | ನಾಡಬೇಡೆಂಬ ಸರ್ವಜ್ಞ ||
--------------
ಸರ್ವಜ್ಞ
ಆದಿಯಲಿ ಜಿನನಿಲ್ಲ | ವೇದದಲಿ ಹುಸಿಯಿಲ್ಲ | ವಾದದಿಂದಾವ ಧನವಿಲ್ಲ ಸ್ವರ್ಗದಿ | ಮಾದಿಗರೆ ಇಲ್ಲ ಸರ್ವಜ್ಞ ||
--------------
ಸರ್ವಜ್ಞ
ಆನೆ ಕನ್ನಡಿಯಲ್ಲಿ | ತಾನಡಗಿ ಇಪ್ಪಂತೆ | ಜ್ಞಾನವುಳ್ಳವರ ಹೃದಯದಲಿ ಪರಶಿವನು | ತಾನಡಗಿ ಇಹನು ಸರ್ವಜ್ಞ ||
--------------
ಸರ್ವಜ್ಞ
ಆರರಟ್ಟುಗಳಿಗಳನು | ಮೂರು ಕಂಟಕರನ್ನು | ಏರು ಜವ್ವನವ ತಡೆಯುವರೆ ಶಿವ ತಾನು | ಬೇರೆ ಇಲ್ಲೆಂದ ಸರ್ವಜ್ಞ ||
--------------
ಸರ್ವಜ್ಞ
ಆರಾರ ನಂಬುವಡೆ | ಆರಯ್ದು ನಂಬುವದು | ನಾರಾಯಣನಿಂದ ಬಲಿಕೆಟ್ಟ | ಮಿಕ್ಕವರ ನಾರು ನಂಬುವರು ಸರ್ವಜ್ಞ ||
--------------
ಸರ್ವಜ್ಞ
ಇಪ್ಪೊತ್ತು ದೇವರನು | ತಪ್ಪದಲೆ ನೆನದಿಹರೆ | ತುಪ್ಪ ಒರಗವು ಉಣಲುಂಟು ತನಗೊಬ್ಬ | ಳಪ್ಪುವಳುಂಟು ಸರ್ವಜ್ಞ ||
--------------
ಸರ್ವಜ್ಞ