ಒಟ್ಟು 11 ಕಡೆಗಳಲ್ಲಿ , 1 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಷ್ಟದಲ ಕಮಲವನು | ಮೆಟ್ಟಿಪ್ಪ ಹಂಸ ತಾ | ಮುಟ್ಟಿಪ್ಪ ಗತಿಯನರಿಯದಾ ಯೋಗಿ ತಾ | ಕೆಟ್ಟನೆಂದರಿಗು ಸರ್ವಜ್ನ್ಯ ||
--------------
ಸರ್ವಜ್ಞ
ಅಷ್ಟದಳಕಮಲದಲಿ | ಕಟ್ಟಿತಿರುಗುವ ಹಂಸ | ಮೆಟ್ಟುವಾ ದಳವ ನಡುವಿರಲಿ ಇರುವದನು | ಮುಟ್ಟುವನೆ ಯೋಗಿ ಸರ್ವಜ್ನ್ಯ ||
--------------
ಸರ್ವಜ್ಞ
ಉದ್ದು ಮದ್ದಿಗೆ ಹೊಲ್ಲ | ನಿದ್ದೆ ಯೋಗಿಗೆ ಹೊಲ್ಲ | ಬಿದ್ದಿರಲು ಹೊಲ್ಲ ಉದ್ಯೋಗಿ ಬಡವಂಗೆ | ಗುದ್ದಾಟ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಒಮ್ಮೆಯುಂಡವ ತ್ಯಾಗಿ | ಇನ್ನೊಮ್ಮೆಯುಂಡವ ಭೋಗಿ | ಬಿಮ್ಮೆಗುಂಡವನು ನೆರೆಹೋಗಿ | ಯೋಗಿ ತಾ ಸುಮ್ಮನಿರುತಿ ಸರ್ವಜ್ಞ ||
--------------
ಸರ್ವಜ್ಞ
ಕುಲವಿಲ್ಲ ಯೋಗಿಗಂ | ಛಲವಿಲ್ಲ ಜ್ಞಾನಿಗಂ | ತೊಲೆ ಕಂಭವಿಲ್ಲ ಗಗನಕ್ಕೆ ಸ್ವರ್ಗದಲಿ | ಹೊಲಗೇರಿಯಿಲ್ಲ ಸರ್ವಜ್ಞ ||
--------------
ಸರ್ವಜ್ಞ
ನಿಜ ವಿಜಯ ಬಿಂದುವಿನ | ಧ್ವಜಪತಾಕೆಯ ಬಿರುದು | ಅಜ ಹರಿಯು ನುತಿಸಲರಿಯರಾ ಮಂತ್ರವನು | ನಿಜಯೋಗಿ ಬಲ್ಲ ಸರ್ವಜ್ನ್ಯ ||
--------------
ಸರ್ವಜ್ಞ
ಪಂಚ ಬೂತಂಗಳೊಳ | ಸಂಚನರಿಯದಲೆ | ಹಂಚನೆ ಹಿಡಿದು ತಿರಿದುಂಬ ಶಿವಯೋಗಿ | ಹಂಚುಹರಿಯಹನು ಸರ್ವಜ್ಞ ||
--------------
ಸರ್ವಜ್ಞ
ಯೋನಿಜರು ಯೋಗಿಯನು | ಹೀನವೆನ್ನುವದೇನು ? | ಅನಂದ ತಾಣದೊಳಗಿರಲು ಯೋಗಿಯಾ | ಮಾನ ಘನವಹುದು ಸರ್ವಜ್ನ್ಯ ||
--------------
ಸರ್ವಜ್ಞ
ರಾಗ ಯೋಗಿಗೆ ಹೊಲ್ಲ | ಭೋಗ ರೋಗಿಗೆ ಹೊಲ್ಲ | ಓಗರವು ಎಣ್ಣೆ - ಉಣಹೊಲ್ಲ ಪರನಿಂದೆ | ಆಗಲುಂ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ