ಒಟ್ಟು 9 ಕಡೆಗಳಲ್ಲಿ , 1 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಆಳು ಇದ್ದರೆ ಅರಸು | ಕೂಳು ಇದ್ದರೆ ಬಿರುಸು | ಆಳುಕೂಳುಗಳು ಮೇಳವಿಲ್ಲದ ಮನೆಯ | ಬಾಳುಗೇಡೆಂದ ಸರ್ವಜ್ಞ ||
ಕೂಳು ಕುತ್ತವೆ ಕುತ್ತ ಕೂಳು ಮೇಳವೆ ಮೇಳ | ಕೂಳೊಂದುಗಳಿಗೆ ತಡೆದಿಹರೆ ಪಾತರದ ಮೇಳ ಮುರಿದಂತೆ ಸರ್ವಜ್ಞ ||
ಕೋಳಿಗಳ ಹಂದಿಗಳ | ಮೇಳದಲಿ ತಾ ಸಾಕಿ | ಏಳುತಲೆ ಕರೆದು ಬಡಿತಿಂದ ಪಾಪಿಗಳ | ಬಾಳೆಲ್ಲ ನರಕ ಸರ್ವಜ್ಞ ||
ಗಾಳಿಯಿಂ ಮರನುರಳಿ | ಹುಲ್ಲೆಲೆಯು ಉಳಿವಂತೆ | ಮೇಳಗಳ ಬಲದಿ ಉರಿಯುವಾ ಖಳನಳಿದು \ ಕೀಳಿ ಬಾಳುವನು ಸರ್ವಜ್ಞ ||
ಜೋಳದಾ ಬೋನಕ್ಕೆ | ಬೇಳೆಯಾ ತೊಗೆಯಾಗಿ | ಕಾಳೆಮ್ಮೆ ಕರೆದ ಹೈನಾಗಿ ಬೆಳವಲದ ಮೇಳ ನೋಡೆಂದ ಸರ್ವಜ್ಞ ||
ಮಾಳನು ಮಾಳಿಯು | ಕೊಳ್ ತಿಂದ ಹೆಮ್ಮೆಯಲಿ ಕೇಳೆ ನೀನಾರ ಮಗನೆಂದು - ನಾ ಶಿವನ ಮೇಳದಣುಗೆಂಬೆ ಸರ್ವಜ್ಞ
ವೀಳ್ಯವಿಲ್ಲದ ಬಾಯಿ | ಕೂಳು ಇಲ್ಲದ ನಾಯಿ | ಬಾಳೆಗಳು ಇಲ್ಲದೆಲೆದೋಟ ಪಾತರದ | ಮೇಳ ಮುರಿದಂತೆ ಸರ್ವಜ್ಞ ||