ಒಟ್ಟು 11 ಕಡೆಗಳಲ್ಲಿ , 1 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಳೆ ಹೊಲ್ಲ ಆಡಿನಾ | ಕೆಳೆ ಹೊಲ್ಲ ಕೋಡಗನು | ಕೋಪ ಓಪರೊಳು ಹೊಲ್ಲ ಮೂರ್ಖನಾ | ಗೆಳೆತನವೆ ಹೊಲ್ಲ | ಸರ್ವಜ್ಞ ||
--------------
ಸರ್ವಜ್ಞ
ಆರು ಬೆಟ್ಟವನೊಬ್ಬ | ಹಾರಬಹುದೆಂದಿಹರೆ | ಹಾರಬಹುದೆಂದು ಎನಬೇಕು | ಮೂರ್ಖನಾ | ಹೋರಾಟ ಸಲ್ಲ ಸರ್ವಜ್ಞ ||
--------------
ಸರ್ವಜ್ಞ
ಒಂದನ್ನು ಎರಡೆಂಬ | ಹಂದಿ ಹೆಬ್ಬುಲಿಯೆಂಬ | ನಿಂದ ದೇಗುಲದ ಮರವೆಂಬ ಮೂರ್ಖ ತಾ | ನೆಂದಂತೆ ಎನ್ನಿ ಸರ್ವಜ್ಞ ||
--------------
ಸರ್ವಜ್ಞ
ಒಲೆಗುಂಡನೊಬ್ಬನೇ | ಮೆಲಬಹುದು ಎನ್ನುವಡೆ | ಮೆಲಭುದು ಎಂಬುವನೆ ಜಾಣ ಮೂರ್ಖನಂ | ಗೆಲಲಾಗದಯ್ಯ ಸರ್ವಜ್ಞ ||
--------------
ಸರ್ವಜ್ಞ
ಜಾತಿ-ಜಾತಿಗೆ ವೈರ | ನೀತಿ ಮೂರ್ಖಗೆ ವೈರ | ಪಾತಕವು ವೈರ ಸುಜನರ್ಗೆ ಅರಿದರಿಗೆ ಏತರದು ವೈರ ಸರ್ವಜ್ಞ ||
--------------
ಸರ್ವಜ್ಞ
ನೆಲವನ್ನು ಮುಗಿಲನ್ನು | ಹೊಲಿವರುಂಟೆಂದರವ | ಹೊಲಿವರು ಹೊಲಿವರು ಎನಬೇಕು | ಮೂರ್ಖನಲಿ | ಕಲಹವೇ ಬೇಡ ಸರ್ವಜ್ಞ ||
--------------
ಸರ್ವಜ್ಞ
ಬೆಟ್ಟವನು ಕೊಂಡೊಂಬ್ಬ | ನಿಟ್ಟಿಹನು ಎಂದಿಹರೆ ಇಟ್ಟಿಹನು ಎಂದು ಎನಬೇಕು ಮೂರ್ಖನಾ | ಬಟ್ಟೆ ಬೇಡೆಂದ ಸರ್ವಜ್ಞ ||
--------------
ಸರ್ವಜ್ಞ
ಮೂರು ಗಾವುದವನ್ನು ಹಾರಬಹುದೆಂದವರ | ಹಾರಬಹುದೆಂದು ಎನಬೇಕು ಮೂರ್ಖನಾ | ಹೋರಾಟ ಸಲ್ಲ ಸರ್ವಜ್ಞ ||
--------------
ಸರ್ವಜ್ಞ
ಮೂರ್ಖಂಗೆ ಬುದ್ಧಿಯನು | ನೂರ್ಕಾಲ ಹೇಳಿದರೆ ಬೋರ್ಕಲ್ಲ ಮೇಲೆ ಮಳಿಗರಿದರಾ ಕಲ್ಲು | ನೀರ್ಕೊಳ್ಳಬಹುದೆ ಸರ್ವಜ್ಞ ||
--------------
ಸರ್ವಜ್ಞ
ಮೊಲನಾಯ ಬೆನ್ನಟ್ಟಿ | ಗೆಲಬಹುದು ಎಂದಿಹರೆ | ಗೆಲಭುದು ಎಂದು ಎನಬೇಕು ಮೂರ್ಖನಲಿ | ಛಲವು ಬೇಡೆಂದ ಸರ್ವಜ್ಞ ||
--------------
ಸರ್ವಜ್ಞ
ಹೊಳೆಯ ನೀರೊಬ್ಬನೇ | ಅಳೆಯಬಹುದೆಂದರವ | ಅಳೆಯಬಹುದೆಂದು ಎನಬೇಕು ಮೂರ್ಖನಂ | ಗೆದೆಯಲಳವಲ್ಲ | ಸರ್ವಜ್ಞ ||
--------------
ಸರ್ವಜ್ಞ