ಒಟ್ಟು 10 ಕಡೆಗಳಲ್ಲಿ , 1 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಡವಿ ಬಟ್ಟೊಡೆದರೂ | ಕೆಡೆಬೀಳಲಿರಿದರೂ | ನಡು ಬೆನ್ನಿನಲಗು ಮುರಿದರೂ ಹಾದರದ | ಕಡಹು ಬಿಡದೆಂದ ಸರ್ವಜ್ಞ ||
--------------
ಸರ್ವಜ್ಞ
ಕಾಲು ಮುರಿದರೆ ಹೊಲ್ಲ | ಬಾಲೆ ಮುದುಕಗೆ ಹೊಲ್ಲ | ನಾಲಿಗೆಯಲೆರಡು ನುಡಿ ಹೊಲ್ಲ | ಸಮರದಲಿ ಸೋಲುವಡೆ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಕುಸ್ತಿಯಲಿ ಭೀಮಬಲ | ಕುಸ್ತಿಯಲಿ ಕಾಮಬಲ | ಅಸ್ತಿ ಮುರಿದಿಹುದು ಕೀಚಕನ ಪರಸತಿಯ | ಪ್ರಸ್ತವೇ ಬೇಡ ಸರ್ವಜ್ಞ ||
--------------
ಸರ್ವಜ್ಞ
ಕೂಳು ಕುತ್ತವೆ ಕುತ್ತ ಕೂಳು ಮೇಳವೆ ಮೇಳ | ಕೂಳೊಂದುಗಳಿಗೆ ತಡೆದಿಹರೆ ಪಾತರದ ಮೇಳ ಮುರಿದಂತೆ ಸರ್ವಜ್ಞ ||
--------------
ಸರ್ವಜ್ಞ
ಪ್ರಸ್ತಕ್ಕೆ ನುಡಿದಿಹರೆ | ಬೆಸ್ತಂತೆ ಇರಬೇಕು | ಪ್ರಸ್ತವನು ತಪ್ಪಿ ನುಡಿದಿಹರೆ | ನಡುಬೆನ್ನಿ ನಸ್ತಿ ಮುರಿದಂತೆ ಸರ್ವಜ್ಞ ||
--------------
ಸರ್ವಜ್ಞ
ಮುರಿದ ಹೊಂಬೆಸೆಯವಡೆ | ಕಿರಿದೊಂದು ರಜ ಬೇಕು | ಮುರಿದ ಕಾರ್ಯವನು ಬೆಸೆಯುವಡೆ ಮತ್ತೊಂದ | ನರಿಯದವರು ಬೇಕು ಸರ್ವಜ್ಞ ||
--------------
ಸರ್ವಜ್ಞ
ವೀಳ್ಯವಿಲ್ಲದ ಬಾಯಿ | ಕೂಳು ಇಲ್ಲದ ನಾಯಿ | ಬಾಳೆಗಳು ಇಲ್ಲದೆಲೆದೋಟ ಪಾತರದ | ಮೇಳ ಮುರಿದಂತೆ ಸರ್ವಜ್ಞ ||
--------------
ಸರ್ವಜ್ಞ
ಸಾಲವನು ತರುವಾಗ | ಹಾಲು - ಹಣ್ಣುಂಬಂತೆ | ಸಾಲಿಗನು ಬಂದು ಎಳೆದಾಗ ಕಿಬ್ಬದಿಯ | ಕೀಲು ಮುರಿದಂತೆ ಸರ್ವಜ್ಞ ||
--------------
ಸರ್ವಜ್ಞ
ಸುಂಕದ ಅಣ್ಣಗಳಾ | ಬಿಂಕವನು ಏನೆಂಬೆ | ಸುಂಕಕ್ಕೆ ಸಟಿಯ ನೆರೆಮಾಡಿ ಕಡೆಯಲ್ಲಿ ಟೊಂಕ ಮುರಿದಿಹುದು ಸರ್ವಜ್ಞ ||
--------------
ಸರ್ವಜ್ಞ