ಒಟ್ಟು 15 ಕಡೆಗಳಲ್ಲಿ , 1 ವಚನಕಾರರು , 14 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಧಕನು ನಿಂದಿರಲು | ಮುಂದೆ ಬಪ್ಪರ ಕಾಣ | ಬಂದರೆ ಬಾರೆಂದೆನರ್ಪ ಗರ್ವಿಯಾ | ದಂದುಗನೆ ಬೇಡ ಸರ್ವಜ್ಞ ||
--------------
ಸರ್ವಜ್ಞ
ಅನ್ನದೇವರ ಮುಂದೆ | ಇನ್ನು ದೇವರು ಉಂಟೆ | ಅನ್ನವಿರುವನಕ ಪ್ರಾಣವೀ ಜಗದೊಳಗೆ | ಅನ್ನದೈವ ಸರ್ವಜ್ಞ ||
--------------
ಸರ್ವಜ್ಞ
ಅರಿತವರ ಮುಂದೆ ತ | ನ್ನರಿವನ್ನು ಮೆರೆಯುವದು | ಅರಿಯದನ ಮುಂದೆ ಮೆರೆದರಾ ಹೊನ್ನೆಂಬ | ತೊರೆಯ ಲೆಚ್ಚಂತೆ ಸರ್ವಜ್ಞ ||
--------------
ಸರ್ವಜ್ಞ
ಇತ್ತುದನು ಈಯದನ | ಮೃತ್ಯುವೊಯ್ಯುದೆ ಬಿಡದು ಹತ್ತಿರ್ದ ಲಕ್ಷ್ಮಿ ತೊಲಗಿ ಹುಟ್ಟುವನವನ | ತೊತ್ತಾಗಿ ಮುಂದೆ ಸರ್ವಜ್ಞ ||
--------------
ಸರ್ವಜ್ಞ
ಎಂತಿರಲು ಪರರ ನೀ ಮುಂದೆ ನಂಬಲು ಬೇಡ | ಕುಂತಿ ಹೆಮ್ಮಗನ ಕೊಲಿಸಿದಳು ಮಾನವರ | ನೆಂತು ನಂಬುವದು ಸರ್ವಜ್ಞ ||
--------------
ಸರ್ವಜ್ಞ
ಎಲ್ಲವರು ಹಿರಿಯವರು | ಬಲ್ಲವರು ಗುರು ಅವರು ನಲ್ಲಳುರೆ ಮುಂದೆ ಸುಳಿದರೇ ಲೋಕದೊಳ | ಗೊಲ್ಲದವರಾರು ಸರ್ವಜ್ಞ ||
--------------
ಸರ್ವಜ್ಞ
ಒಂದರಾ ಮೊದಲೊಳಗೆ ಬಂದಿಹುದು ಜಗವೆಲ್ಲ | ಒಂದರಾ ಮೊದಲನರಿಯುವಡೆ ಜಗ ಕಣ್ಣು | ಮುಂದೆ ಬಂದಿಹುದು ಸರ್ವಜ್ಞ ||
--------------
ಸರ್ವಜ್ಞ
ತಂದೆ-ತಾಯಿಗಳ ಘನ | ದಿಂದ ವಂದಿಸುವಂಗೆ | ಬಂದ ಕುತುಗಳು ಬಯಲಾಗಿ ಸ್ವರ್ಗವದು | ಮುಂದೆ ಬಂದಕ್ಕು ಸರ್ವಜ್ಞ ||
--------------
ಸರ್ವಜ್ಞ
ನಂದೆಯನು ಭದ್ರೆಯನು | ಒಂದಾಗಿ ಅರ್ಧಿಸಲು | ಅಂದಿನ ತಿಥಿಯ ಸಮನಾಗೆ ಗ್ರಹಣ ತಾ | ಮುಂದೆ ಬಂದಕ್ಕು ಸರ್ವಜ್ಞ ||
--------------
ಸರ್ವಜ್ಞ
ಪಂಚವಿಂಶತಿ ತತ್ವ | ಸಂಚಯದ ದೇಹವನು | ಹಂಚಿಂದು ಕಾಣಲರಿಯದಿರೆ ಭವ ಮುಂದೆ | ಗೊಂಚಲಾಗಿಹದು ಸರ್ವಜ್ಞ ||
--------------
ಸರ್ವಜ್ಞ
ಪಂಚವಿಂಶಶಿತತ್ವ | ಸಂಚದ ದೇಹವನು ಹಂಚೆಂದು ಕಾಣಲರಿಳೆಯದೋಡೆ - ಭವ ಮುಂದೆ ಗೊಂಚಲಾಗಿಹುದು ಸರ್ವಜ್ಞ
--------------
ಸರ್ವಜ್ಞ
ರಂಧ್ರ - ಗತಿ - ಆದಿತ್ಯ | ನೊಂದಾಗಿ ಅರ್ಥಿಸುತ | ಅಂದಿನಾ ತಿಥಿಯನೊಡಗೂಡೆ ನಕ್ಷತ್ರ | ಮುಂದೆ ಬಂದಕ್ಕು ಸರ್ವಜ್ಞ ||
--------------
ಸರ್ವಜ್ಞ
ಸಂದಿರ್ದ ಮಾಸವನು | ಕುಂದದಿಮ್ಮಡಿ ಮಾಡಿ | ಅಂದಿನಾ ತಿಥಿಯ ನೊಡಗೂಡಲಾ ತಾರೆ | ಮುಂದೆ ಬಂದಿಹುದು ಸರ್ವಜ್ಞ ||
--------------
ಸರ್ವಜ್ಞ
ಹಿಂದೆ ಪಾಪವ ಮಾಡಿ | ಮುಂದೆ ಪುಣ್ಯವು ಹೇಗೆ | ಹಿಂದು - ಮುಂದರಿದು ನಡೆಯದಿರೆ ನರಕದಲಿ ಬೆಂದು ಸಾಯುವನು ಸರ್ವಜ್ಞ ||
--------------
ಸರ್ವಜ್ಞ