ಒಟ್ಟು 6 ಕಡೆಗಳಲ್ಲಿ , 1 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಡಿಯೇರಲು ಗುರುವು | ನೋಡೆ ಕಡೆ ಮಳೆಯಕ್ಕು | ನಾಡೊಳಗೆಲ್ಲ ಬೆಳೆಯಕ್ಕು ಪ್ರಜೆಗಳು | ಈಡೇರಲಕ್ಕು ಸರ್ವಜ್ಞ ||
--------------
ಸರ್ವಜ್ಞ
ಕನ್ಯೆಕ್ಕೆ ಗುರು ಬರಲು | ಚನ್ನಾಗಿ ಮಳೆಯಕ್ಕು | ಚನ್ನಾಗಿ ಪಶುವು ಕರೆಯಕ್ಕು ಮಂಡನದ | ಕನ್ಯೆಯರು ಅಕ್ಕು ಸರ್ವಜ್ಞ ||
--------------
ಸರ್ವಜ್ಞ
ತುಲವನೇರಲು ಗುರುವು | ನೆಲೆಯಾಗಿ ಮಳೆಯಕ್ಕು ಫಲವು ಧಾನ್ಯಗಳು ಬೆಳೆಯಕ್ಕು ಪ್ರಜೆಗಳಿಗೆ | ನಿಲಕಾಲಕ್ಕು ಸರ್ವಜ್ಞ ||
--------------
ಸರ್ವಜ್ಞ
ಬಿಲ್ಲನೇರಲು ಗುರುವು | ತಲ್ಲಣವು ಜಗಕೆಲ್ಲ | ಕಲ್ಲು ಮೇಲೆಲ್ಲ ಮಳೆಯಕ್ಕು ನೃಪರಿಗೆ | ತಲ್ಲಣವೇ ಅಕ್ಕು ಸರ್ವಜ್ಞ ||
--------------
ಸರ್ವಜ್ಞ
ವಾಯು-ವಾಯುವ ಕೂಡೆ | ವಹಿಲದಿಂ ಮಳೆಯಕ್ಕು | ವಾಯು - ನೈಋತ್ಯನೊಡಗೂಡೆ ಮಳೆ ತಾನು | ವಾಯುವೆ ಅಕ್ಕು ಸರ್ವಜ್ಞ ||
--------------
ಸರ್ವಜ್ಞ
ವೃಷಭನೇರಲು ಗುರುವು | ವಸುಧೆಯೊಳು ಮಳೆಯಕ್ಕು | ಪಶುಸ್ತ್ರೀಯರಿಗೆ ಜಯವಕ್ಕು ಜನರೆಲ್ಲ | ಮಿಸುಯಂತಕ್ಕು ಸರ್ವಜ್ಞ ||
--------------
ಸರ್ವಜ್ಞ