ಒಟ್ಟು 6 ಕಡೆಗಳಲ್ಲಿ , 1 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಟು ಹಣವುಳ್ಳ ತನಕ | ಬಂಟನಂತಿರುತಿಕ್ಕು | ಎಂಟು ಹಣ ಹೋದ ಮರುದಿನವೆ ಹುಳುತಿಂದ | ದಂತಿನಂತಕ್ಕು ಸರ್ವಜ್ಞ ||
--------------
ಸರ್ವಜ್ಞ
ಕಾಯಕವು ಉಳ್ಳವಕ | ನಾಯಕನು ಎನಿಸಿಪ್ಪ | ಕಾಯಕವು ತೀರ್ದ ಮರುದಿನವೆ ಸುಡುಗಾಡ | ನಾಯಕನು ಎನಿಪ ಸರ್ವಜ್ಞ ||
--------------
ಸರ್ವಜ್ಞ
ಧನಕನಕವುಳ್ಳವನ-ದಿನಕರನ ವೋಲಕ್ಕು | ಧನಕನಕ ಹೋದ ಮರುದಿನವೆ ಹಾಳೂರು ಶುನಕನಂತಕ್ಕು ಸರ್ವಜ್ಞ ||
--------------
ಸರ್ವಜ್ಞ
ನಾಲ್ಕು ಹಣವುಳ್ಳತನಕ | ಪಾಲ್ಕಿಯಲಿ ಮೆರೆದಿಕ್ಕು | ನಾಲ್ಕು ಹಣ ಹೋದ ಮರುದಿನವೆ ಕೋಳದಲಿ ಸಿಲ್ಕಿದಂತಕ್ಕು ಸರ್ವಜ್ಞ ||
--------------
ಸರ್ವಜ್ಞ
ಮಡದಿ ಮಕ್ಕಳ ಮಮತೆ | ಒಡಲೊಡನೆ ಯಿರುವತನಕ | ಓದಲೊಡವೆ ಹೋದ ಮರುದಿನವೆ ಅವರೆಲ್ಲ | ಕಡೆಗೆ ಸಾರುವರು ಸರ್ವಜ್ಞ ||
--------------
ಸರ್ವಜ್ಞ
ಸಿರಿಯಣ್ಣನುಳ್ಳತನಕ | ಹಿರಿಯಣ್ಣ ನೆನೆಸಿಪ್ಪ | ಸಿರಿಯಣ್ಣ ಹೋದ ಮರುದಿನವೆ ಹಿರಿಯಣ್ಣ | ನರಿಯಣ್ಣನೆಂದ ಸರ್ವಜ್ಞ ||
--------------
ಸರ್ವಜ್ಞ