ಒಟ್ಟು 34 ಕಡೆಗಳಲ್ಲಿ , 1 ವಚನಕಾರರು , 32 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅರಮನೆಯಲಿರುತಿಹುದು | ಕರದಲ್ಲಿ ಬರುತಿಹುದು | ಕೊರೆದು ವಂಶಜರ ತಿನುತಿಹುದು | ಕವಿಗಳಲಿ | ದೊರೆಗಳಿದ ಪೇಳಿ ಸರ್ವಜ್ಞ ||
ಆಡಿಗಡಿಕೆಯ ಹೊಲ್ಲ | ಗೋಡೆ ಬಿರುಕಲು ಹೊಲ್ಲ | ಒಡಕಿನಾ ಮನೆಯೊಳಿರ ಹೊಲ್ಲ ಬಡವಂಗೆ | ಸಿಡುಕು ತಾ ಹೊಲ್ಲ ಸರ್ವಜ್ಞ ||
ಆಳು ಇದ್ದರೆ ಅರಸು | ಕೂಳು ಇದ್ದರೆ ಬಿರುಸು | ಆಳುಕೂಳುಗಳು ಮೇಳವಿಲ್ಲದ ಮನೆಯ | ಬಾಳುಗೇಡೆಂದ ಸರ್ವಜ್ಞ ||
ಊರಗಳ ಮೂಲದಲಿ | ಮಾರನರಮನೆಯಲ್ಲಿ ಭೋರಿಜೀವಿಗಳ ಹುಟ್ಟಿಸಿದ - ಅಜನಿಗಿ ನ್ನಾರು ಸಾಯುಂಟೆ ಸರ್ವಜ್ಞ
ಎಮ್ಮೆ ಹಯನವು ಲೇಸು | ಕಮ್ಮನಾಮ್ಲವು ಲೇಸು | ಸುಮ್ಮನೆಯ ಒಡವೆ ಬರಲೇಸು ಊರಿಂಗೆ | ಕಮ್ಮಾರ ಲೇಸು ಸರ್ವಜ್ಞ ||
ಒಕ್ಕಲಿಲ್ಲದ ಊರು | ಮಕ್ಕಳಿಲ್ಲದ ಮನೆಯು | ಲೆಕ್ಕವಿಲ್ಲದವನ ಬೇಹಾರ ಇವು ಮೂರು | ದು:ಖ ಕಾಣಯ್ಯ ಸರ್ವಜ್ಞ ||
ಕಿಚ್ಚುಂಟು ಕೆಸರುಂಟು | ಬೆಚ್ಚನಾ ಮನೆಯುಂಟು | ಇಚ್ಚಗೇ ಬರುವ ಸತಿಯುಂಟು | ಮಲೆನಾಡ ಮೆಚ್ಚ ನೋಡೆಂದ ಸರ್ವಜ್ಞ ||
ಕುಲವನ್ನು ಕೆಡಿಸುವದು | ಛಲವನ್ನು ಬಿಡಿಸುವದು | ಹೊಲೆಯನಾ ಮನೆಯ ಹೊಗಿಸುವದು ಕೂಳಿನಾ | ಬಲವ ನೋಡೆಂದ ಸರ್ವಜ್ಞ ||
ಕೂಳಿಲ್ಲದವನೊಡಲು | ಹಾಳುಮನೆಯಂತಕ್ಕು | ಹೇಳಿದಲೆ ಹೋಗಲು ರುಜೆಗಳಿಂ ತನುವೊಡೆದು | ಹಾಳೆಯಂತಕ್ಕು ಸರ್ವಜ್ಞ ||
ಗಾಳಿ-ಧೂಳಿಯ ದಿನಕೆ | ಮಾಳೀಗೆ ಮನೆ ಲೇಸು | ಹೊಳೀಗೆಯು ತುಪ್ಪ ಉಣಲೇಸು ಬಾಯಿಗಂ | ವೀಳ್ಯವೇ ಲೇಸು ಸರ್ವಜ್ಞ ||
ಜಾತಿಹೀನರ ಮನೆಯ | ಜ್ಯೋತಿ ತಾ ಹೀನವೇ | ಜಾತಿ-ವಿಜಾತಿಯೆನ್ನಬೇಡ ದೇವನೊಲಿ | ದಾತನೇ ಜಾತ ಸರ್ವಜ್ಞ ||
ಜ್ಯೋತಿಯಿಲ್ಲದ ಮನೆಯು | ರೀತಿಯಿಲ್ಲದ ಸತಿಯು ನಿತಿಯಿಲ್ಲದಾ ವಿಪ್ರನುಂ ಭಿಕ್ಷದಾ | ಪಾತ್ರೆಯೊಡೆದಂತೆ ಸರ್ವಜ್ಞ ||
ತುಪ್ಪ ಒಗರ ಲೇಸು | ಉಪ್ಪರಿಗೆ ಮನೆ ಲೇಸು | ಅಪ್ಪ ಬಾರೆಂಬ ಮಗ ಲೇಸು ಊರೊಳಗೆ | ಶಿಂಪಿಗನು ಲೇಸು | ಸರ್ವಜ್ಞ ||
ನರಹತ್ಯವೆಂಬುದು | ನರಕದಾ ನಡುಮನೆಯು | ಗುರು ಶಿಶುವು ನರರ ಹತ್ಯವನು ಮಾಡಿದನ | ಇರವು ರೌರವವು ಸರ್ವಜ್ಞ ||
ನೀತಿ ದೇಶದ ಮಧ್ಯೆ | ನೀತಿಯಾ ಮೆಯಿಹುದು ಪಾತಕರಿಗಿಹುದು ಸೆರೆಮನೆಯು ಅರಮನೆ ಪು | ನೀತರಿಗೆಂದ ಸರ್ವಜ್ಞ ||