ಒಟ್ಟು 9 ಕಡೆಗಳಲ್ಲಿ , 1 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಡಿವ ನೀರನು ತಂದು | ಅಡಿಗೆ ಮಾಡಿದ ಮೇಲೆ | ಒಡನುಣ್ಣದಾಗದಿಂತೆಂಬ ಮನುಜರ್‍ಅ | ಒಡನಾಟವೇಕೆ ಸರ್ವಜ್ಞ ||
--------------
ಸರ್ವಜ್ಞ
ಕೂಳು ಹೋಗುವ ತನಕ | ಗೂಳಿಯಂತಿರುತಿಕ್ಕು | ಕೂಳು ಹೋಗದಾ ಮುದಿ ಬರಲು ಮನುಜನವ | ಮೂಳನಾಯಕ್ಕು ಸರ್ವಜ್ಞ ||
--------------
ಸರ್ವಜ್ಞ
ಜೊಳ್ಳು ಮನುಜರು ತಾವು | ಸುಳ್ಳು ಸಂಸಾರದೊಳು ಮಳ್ಳಿಡಿದು ಮಾಯೆಯೆಂಬವಳ ಬಲೆಯೊಳಗೆ | ಹೊರಳಾಡುತಿಹರು ಸರ್ವಜ್ಞ ||
--------------
ಸರ್ವಜ್ಞ
ಜ್ವರ ಬನ್ದ ಮನುಜಂಗೆ | ನೊರೆವಾಲು ವಿಷಕ್ಕು | ನರಕದಲಿ ಬೀಳ್ವ ಅಧಮಂಗ ಶಿವಭಕ್ತಿ | ಹಿರಿದು ವಿಷಪಕ್ಕು ಸರ್ವಜ್ಞ ||
--------------
ಸರ್ವಜ್ಞ
ತಪ್ಪು ಮಾಡಿದ ಮನುಜ | ಗೊಪ್ಪುವದು ಸಂಕೋಲೆ | ತಪ್ಪು ಮಾಡದಲೆ ಸೆರೆಯು ಸಂಕೋಲೆಗಳು | ಬಪ್ಪವನೆ ಪಾಪಿ ಸರ್ವಜ್ಞ ||
--------------
ಸರ್ವಜ್ಞ
ಧಾತು ಏಳನು ಕಲೆತು | ಭೂತಪಂಚಕವಾಗಿ | ಓತು ದೇಹವನು ಧರಿಸಿರ್ದ ಮನುಜರ್ಗೆ | ಜಾತಿಯತ್ತಣದು ಸರ್ವಜ್ಞ ||
--------------
ಸರ್ವಜ್ಞ
ಮರಹುಳ್ಳ ಮನುಜರಿಗೆ | ತೆರನಾವುರೆವುದಕೆ ಕರಿಗೊಂಡ ಭ್ರಮೆಯ ಪರೆವ - ಗುರುವಿನ ಭೋಧೆ ಕರಿಗೊಳ್ಳಬೇಕು ಸರ್ವಜ್ಞ
--------------
ಸರ್ವಜ್ಞ
ಸುಡುವಗ್ನಿಯನು ತಂದು | ಅಡಿಗೆ ಮಾಡಿದ ಮೇಲೆ | ಒಡನುಣ್ಣದಾಗದಿಂತೆಂಬ ಮನುಜರ್‍ಆ | ಒಡನಾಟವೇಕೆ ಸರ್ವಜ್ಞ ||
--------------
ಸರ್ವಜ್ಞ
ಹಸಿಯ ಸೌದೆಯ ತಂದು | ಹೊಸೆದರುಂಟೇ ಕಿಚ್ಚು ವಿಷಯಂಅಗಳುಳ್ಳ ಮನುಜರಿಗೆ - ಗುರುಕರುಣ ವಶವರ್ತಿಯಹುದೆ ಸರ್ವಜ್ಞ
--------------
ಸರ್ವಜ್ಞ