ಒಟ್ಟು 11 ಕಡೆಗಳಲ್ಲಿ , 1 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಆಸನವು ದೃಢವಾಗಿ | ನಾಶಿಕಾಗ್ರದಿ ದಿಟ್ಟು | ಸೂಸವ ಮನವ ಫನದಲಿರಿಸಿದನು ಜಗ | ದೀಶ ತಾನಕ್ಕು ಸರ್ವಜ್ಞ ||
ಎತ್ತ ಹೋದರೂ ಮನವ | ಹತ್ತಿಕೊಂಡೇ ಬಹುದು | ಮತ್ತೊಬ್ಬ ಸೆಳೆದುಕೊಳಲರಿಯದಾ | ಜ್ಞಾನದಾ | ಬಿತ್ತು ಲೇಸೆಂದು ಸರ್ವಜ್ಞ ||
ಕಣ್ಣು ನಾಲಿಗೆ ಮನವ | ಪನ್ನಗಧರ ಕೊಟ್ಟ | ಚಿನ್ನಾಗಿ ಮನವ | ತೆರೆದ ನೀ ಬಿಡದೆ ಶ್ರೀ | ಚಿನ್ನನಂ ನೆನಯೋ ಸರ್ವಜ್ಞ ||
ಕಣ್ಣು ಸಣ್ಣದು ತಾನು | ಹಣ್ಣದಿಹುದೊಂದಿಲ್ಲ | ತಣ್ಣಗಿಹ ಮನವ ನುರಿಸುವದು ಇದನು ಕೊಕೊಂ | ದಣ್ಣಗಳು ಆರು ಸರ್ವಜ್ಞ ||
ಕಣ್ಣು-ನಾಲಿಗೆ-ಮನವು | ತನ್ನದೆಂದೆನಬೇಡ | ಅನ್ಯರೇ ಕೊಂದರೆನಬೇಡ ಇವು ಮೂರೂ | ತನ್ನ ಕೊಲ್ಲುವದು ಸರ್ವಜ್ಞ ||
ನೋಟ ಶಿವಲಿಂಗದಹಲಿ | ಜೂಟ ಜ್ಂಗಮದಲಿ | ನಾಟನಾ ಮನವು ಗುರುವಿನಲಿ ಭಕ್ತನಾ ಮಾಟವನು ನೋಡು ಸರ್ವಜ್ಞ ||
ಪುಲ್ಲೆ ಚರ್ಮವನುಟ್ಟು | ಹುಲ್ಲು ಬೆಳ್ಳಗೆ ಬಿಟ್ಟು ಕಲ್ಲು ಮೇಲಿಪ್ಪ ತಪಸಿಯ ಮನವೆಲ್ಲ | ನಲ್ಲೆಯಲ್ಲಿಹುದು ಸರ್ವಜ್ಞ ||
ಮನವು ಮುಟ್ಟಲು ಗಂಡು | ತನವು ಸೋಂಕಲು ಪಾಪ ಮನವೇಕದಿಂದ ಗುರುಚರಣ - ಸೋಂಕಿದೊಡೆ ತನು ಶುದ್ದವಯ್ಯ ಸರ್ವಜ್ಞ
ಮನವೆಂಬ ಮರ್ಕಟವು | ತನುವೆಂಬ ಮರನೇರಿ ತಿನುತಿಹುದು ವಿಷಯ ಫಲಗಳನು | ಕರುಣೆ ನೀ ತನುಮನ ಕಾಯೋ ಸರ್ವಜ್ನ್ಯ ||