ಒಟ್ಟು 11 ಕಡೆಗಳಲ್ಲಿ , 1 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಚಾರವಿಹುದೆಂದು | ಲೋಹಗುಂಡಿಗೆ ವಿಡಿದು | ಭೂಚರದಿ ಸತ್ತ ನವಿಲುಗರಿಪಿಡಿದಿರಲು | ನೀಚರೆನಿಸಿರರೆ ಸರ್ವಜ್ಞ ||
--------------
ಸರ್ವಜ್ಞ
ಎರೆಯನ್ನು ಉಳುವಂಗೆ | ದೊರೆಯನ್ನು ಪಿಡಿದಂಗೆ | ಉರಗ ಭೂಷಣನ ನೆನೆವಂಗೆ ಭಾಗ್ಯವು | ಅರಿದಲ್ಲವೆಂದು ಸರ್ವಜ್ಞ ||
--------------
ಸರ್ವಜ್ಞ
ಕಂಡಂತೆ ಹೇಳಿದರೆ | ಕೆಂಡ ಉರಿಯುವುದು ಭೂ | ಮಂಡಲವ ಒಳಗೆ ಖಂಡಿತನಾಡುವರ | ಕಂಡಿಹುದೆ ಕಷ್ಟ ಸರ್ವಜ್ಞ ||
--------------
ಸರ್ವಜ್ಞ
ಕಂಡುದನು ಆಡೆ ಭೂ | ಮಂಡಲವು ಮುನಿಯುವುದು | ಕೊಂಡಾಡುತಿಚ್ಚೆ ನುಡಿದಿಹರೆ ಜಗವೆಲ್ಲ ಮುಂಡಾಡುತಿಹುದು ಸರ್ವಜ್ಞ ||
--------------
ಸರ್ವಜ್ಞ
ತೆಪ್ಪವನ್ನು ನಂಬಿದಡೆ | ತಪ್ಪದಲೆ ತಡಗಹದು | ಸರ್ಪಭೂಷಣನ ನಂಬಿದಡೆ ಭವಪಾಶ | ತಪ್ಪಿ ಹೋಗುವುದು ಸರ್ವಜ್ಞ ||
--------------
ಸರ್ವಜ್ಞ
ಧಾತು ಏಳನು ಕಲೆತು | ಭೂತಪಂಚಕವಾಗಿ | ಓತು ದೇಹವನು ಧರಿಸಿರ್ದ ಮನುಜರ್ಗೆ | ಜಾತಿಯತ್ತಣದು ಸರ್ವಜ್ಞ ||
--------------
ಸರ್ವಜ್ಞ
ನಡೆವುದೊಂದೇ ಭೂಮಿ | ಕುಡಿವುದೊಂದೇ ನೀರು | ಸುಡುವಗ್ನಿಯೊಂದೇ ಇರುತಿರೆ ಕುಲಗೋತ್ರ | ನಡುವೆ ಎತ್ತಣದು ಸರ್ವಜ್ಞ ||
--------------
ಸರ್ವಜ್ಞ
ಪಂಚಲೋಹದ ಕಂಬಿ | ಮುಂಚೆ ಭೂಮಿಗೆ ಹಾಸಿ | ಕಂಚಿನಾ ರಥವ ನಡಿಸುವರು ಅದರೋಟ | ಮಿಂಚು ಹೊಡೆದಂತೆ ಸರ್ವಜ್ಞ ||
--------------
ಸರ್ವಜ್ಞ
ಭೂತೇಶಗೆರಗುವನು | ಜಾತಿ ಮಾದಿಗನಲ್ಲ | ಜಾತಿಯಲಿ ಹುಟ್ಟಿ ಶಿವನಿಂಗೆ ಶರಣೆನ್ನ | ದಾತ ಮಾದಿಗರು ಸರ್ವಜ್ಞ ||
--------------
ಸರ್ವಜ್ಞ
ಹಾರುವರ ನಂಬಿದವ | ರಾರಾರು ಉಳಿದಿಹರು | ಹಾರುವರನು ನಂಬಿ ಕೆಟ್ಟರಾ ಭೂಪರಿ | ನ್ನಾರು ನಂಬುವರು ಸರ್ವಜ್ಞ ||
--------------
ಸರ್ವಜ್ಞ
ಹುತ್ತ ಹಿತ್ತಲು ಹೊಲ್ಲ | ಬೆತ್ತ ಭೂತಕೆ ಹೊಲ್ಲ | ಒತ್ತೆಗೊಂಬಳಿಗೆ ತುರಿ ಹೊಲ್ಲ ಒಣಕೂಳ | ತುತ್ತು ತಾ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ