ಒಟ್ಟು 21 ಕಡೆಗಳಲ್ಲಿ , 1 ವಚನಕಾರರು , 15 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಕಡುಭಕ್ತನಾಗಲೀ | ಜಡೆಧಾರಿಯಾಗಲೀ | ನದೆವ ವೃತ್ತಿಯಲಿ ನದೆಯದೊಡೆ ಆ ಭಕ್ತಿ | ಹೊದೆವ ಶಂಖೆಂದ ಸರ್ವಜ್ಞ ||
ಕೊಡಲೊಬ್ಬಳು ಸತಿಯು | ನೋಡಲೊಬ್ಬ ನೆಂಟ | ಬೇಡಿದ್ದನ್ನು ಕೊಡುವ ನೃಪತಿಯು ಭಕ್ತಿಯನು | ಮಾಡಿದರಿಗುಂಟು ಸರ್ವಜ್ಞ ||
ಕೋಳಿಕೂಗದಮುನ್ನ | ಏಳುವದು ನಿತ್ಯದಲಿ | ಬಾಳ ಲೋಚನನ ಭಕ್ತಿಯಿಂ ನೆನೆದರೆ | ಸರ್ವಜ್ಞ ||
ಗುರಿಯ ತಾಗದ ಕೋಲ | ನೂರಾರುನೆಸೆದೇನು ? | ಬರಡಿಂಗ ಭಕ್ತಿ ಭಜಸಿದೊಡೆ ಅದು ತಾನು | ಇರಲರಿಯದಯ್ಯ ಸರ್ವಜ್ಞ ||
ಜ್ವರ ಬನ್ದ ಮನುಜಂಗೆ | ನೊರೆವಾಲು ವಿಷಕ್ಕು | ನರಕದಲಿ ಬೀಳ್ವ ಅಧಮಂಗ ಶಿವಭಕ್ತಿ | ಹಿರಿದು ವಿಷಪಕ್ಕು ಸರ್ವಜ್ಞ ||
ನಿಲ್ಲದಲೆ ಹರಸಿದಡೆ | ಕಲ್ಲು ಭೇದಿಸಲಕ್ಕು | ಬಲ್ಲಂತ ಶಿವನ ಭಕ್ತಿಯಿಂ ಭಜಿಸಿಡೆ | ಇಲ್ಲೆನಲಿಕರಿಯ ಸರ್ವಜ್ಞ ||
ಪರುಷ ಕಬ್ಬುನದೆಸೆವ | ಕರಡಿಗೆಯೊಳಡರುವದೆ | ಹರ ಭಕ್ತಿಯಿಳ್ಳ ಮಹಿಮೆ ಸಂಸಾರದೊಳು | ಎರಕವಾಗಿಹನೆ ಸರ್ವಜ್ಞ ||
ಭಕ್ತಗೆರಡಕ್ಕರವು | ಮುಕ್ತಿಗೆರಡಕ್ಕರವು | ಭಕ್ತಿಯಿಂ ಮುಕ್ತಿ ಪಡೆಯುವರೆ ಬಿಡದೆ ಆ | ರಕ್ಕರವ ಪೇಳಿ ಸರ್ವಜ್ಞ ||
ಭಕ್ತರೊಡಗೂಡುವದು | ಭಕ್ತರೊಡನಾಡುವದು | ಭಕ್ತಿಯೊಳು ಬಿಡುವ ಬೆರೆದಿರ್ದ ಭಕ್ತತಾ | ಮುಕ್ತನಾಗಿಹನು ಸರ್ವಜ್ಞ ||
ಭಕ್ತಿಯಿಂದಲೆ ಯುಕ್ತಿ | ಭಕ್ತಿಯಿಂದಲೆ ಶಕ್ತಿ | ಭಕ್ತಿವಿರಕ್ತಿಯಳಿವರೀ ಜಗದಲ್ಲಿ | ಮುಕ್ತಿಯಿಲ್ಲೆಂದ ಸರ್ವಜ್ಞ ||
ಭಕ್ತಿಯಿಲ್ಲದ ಶಿಷ್ಯ | ಗೊತ್ತಿ ಕೊಟ್ಟುಪದೇಶ ಬತ್ತಿದ ಕೆರೆಯ ಬಯಲಲ್ಲಿ - ರಾಜನವ ಬಿತ್ತಿ ಬೆಳೆವಂತೆ ಸರ್ವಜ್ಞ
ಶಿವಭಕ್ತಿಯುಳ್ಳಾತ | ಭವಮುಕ್ತನಾದಾತ | ಶಿವಭಕ್ತಿಯಿರದ ಭಕ್ತಿಂಗೆ ಎಂದೆಂದು | ಭವಮುಕ್ತಿಯಿಲ್ಲ ಸರ್ವಜ್ಞ ||
ಸತಿಯರಿರ್ದಡೇನು ? ಸುತರಾಗಿ ಫಲವೇನು ? | ಶತಕೋಟಿಧನವ ಗಳಿಸೇನು ? ಭಕ್ತಿಯಾ | ಸ್ಥಿತಿಯಿಲದನಕ ಸರ್ವಜ್ಞ ||
ಹರಭಕ್ತಿಯಿಲ್ಲದ | ಪರಮಋಷಿ ಮುಖ್ಯನೇ ಹರಭಕ್ತಿಯುಳ್ಳ ಸ್ವಪಚನಾ - ದೊಡೆಯಾತ್ ಪರಮ ಋಷಿ ತಾನೆ ಸರ್ವಜ್ಞ
ಹರಭಕ್ತಿಹಲ್ಲದೆ | ಹರೆದು ಹೋಗದು ಪಾಪ ಹರಭಕ್ತಿಯುಳ್ಳ ಗುರುವರ - ನೆನ್ನೆಯ ಗುರು ದೇವರೆಂಬೆ ಸರ್ವಜ್ಞ