ಒಟ್ಟು 91 ಕಡೆಗಳಲ್ಲಿ , 1 ವಚನಕಾರರು , 73 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅಕ್ಕಸಾಲಿಗನೂರಿ | ಗೊಕ್ಕಲೆಂದೆನಬೇಡ | ಬೆಕ್ಕು ಬಂದಿಲಿಯ ಹಿಡಿದಂತೆ ಊರಿಗವ | ರಕ್ಕಸನು ತಾನು ಸರ್ವಜ್ಞ ||
ಅಕ್ಕಸಾಲೆಯ ಮಗನು | ಚಿಕ್ಕನೆಂದೆನಬೇಡ | ಚಿಕ್ಕಟವು ಮಯ ಕಡಿವಮ್ತೆ ಚಿಮ್ಮಟವ | ನಿಕ್ಕುತಲೆ ಕಳುವ ಸರ್ವಜ್ಞ ||
ಅಚ್ಚು ಇಲ್ಲದ ಭಂಡಿ | ಮೆಚ್ಚು ಇಲ್ಲದ ದೊರೆಯು | ರಚ್ಚೆಯಲಿ ಇಹನ ಕಿವಿಮಾತು ಎಂದಿಗೂ | ನೆಚ್ಚಬೇಡೆಂದ ಸರ್ವಜ್ಞ ||
ಅಟ್ಟಿಕ್ಕುವಾಕೆಯೊಳು | ಬೆಟ್ಟಿತ್ತು ಹಗೆ ಬೇಡ | ಸಟ್ಟುಗದೆ ಗೋಣ ಮುರಿಯುವಳೂ ಅಲಗಿಲ್ಲ | ದಿಟ್ಟಯಾಳವಳು ಸರ್ವಜ್ಞ ||
ಅಂಧಕನು ನಿಂದಿರಲು | ಮುಂದೆ ಬಪ್ಪರ ಕಾಣ | ಬಂದರೆ ಬಾರೆಂದೆನರ್ಪ ಗರ್ವಿಯಾ | ದಂದುಗನೆ ಬೇಡ ಸರ್ವಜ್ಞ ||
ಅರಿಯೆನೆಂಬುವದೊಂದು | ಅರಸು ಕೆಲಸವು ಕಾಣೋ | ಅರಿದೆನೆಂದಿಹನು ದೊರೆಗಳಾ ಆಳೆಂದು | ಮರೆಯಬೇಡೆಂದ ಸರ್ವಜ್ಞ ||
ಆಡಿ ನಳ ಕೆಟ್ಟ ಮ | ತ್ತಾಡಿ ಧರ್ಮಜ ಕೆಟ್ಟ | ಕೂಡಿದ ನಾಲ್ವರೂ ತಿರಿದುಂಡರೆ ನೆತ್ತವ | ನಾಡಬೇಡೆಂಬ ಸರ್ವಜ್ಞ ||
ಆಡಿ ಮರಗಲು ಹೊಲ್ಲ | ಕೂಡಿ ಕಾದಲು ಹೊಲ್ಲ | ಬೇಡನಾ ನಂಟು ತರವಲ್ಲ ಅವನ ಕುರಿ | ತಾಡುವದೆ ಹೊಲ್ಲ ಸರ್ವಜ್ಞ ||
ಇದ್ದೂರ ಸಾಲ ಹೇ | ಗಿದ್ದರೂ ಕೊಳಬೇಡ | ಇದ್ದುದವನು ಸೆಳೆದು ಸಾಲಕೊಟ್ಟವನೊದ್ದು | ಗಿದ್ದು ಕೇಳುವನು ಸರ್ವಜ್ಞ ||
ಇಲ್ಲದಾ ಮಾಯೆಯದು | ಎಲ್ಲಿಂದಲೆನಹದಲೆ | ಬಲ್ಲಿತದು ಮಾಯೆಯೆನಬೇಡ | ತಿಳಿಯಲ್ಕೆ ಎಲ್ಲಿಹುದು ? ಮಾಯೆ ಸರ್ವಜ್ಞ ||
ಈರೈದು ತಲೆಯುಳ್ಳ | ಧೀರ ರಾವಣ ಮಡಿದ | ವೀರ ಕೀಚಕನು ಗಡೆ ಸತ್ತು ಪರಸತಿಯ | ದಾರಿ ಬೇಡೆಂದ ಸರ್ವಜ್ಞ ||
ಉತ್ತಮದ ವರ್ಣಿಗಳೆ | ಉತ್ತಮರು ಎನಬೇಡ | ಮತ್ತೆ ತನ್ನಂತೆ ಬಗೆವರನೆಲ್ಲರನು | ಉತ್ತಮರು ಎನ್ನು ಸರ್ವಜ್ಞ ||
ಉತ್ತಮರು ಎಂಬುವರು | ಸತ್ಯದಲಿ ನಡೆಯುವರು | ಉತ್ತಮರು ಅಧಮರೆನಬೇಡ ಅವರೊಂದು | ಮುತ್ತಿನಂತಿಹರು ಸರ್ವಜ್ಞ ||
ಉತ್ತಮರು ಪಾಲ್ಗೊಡಲೊ | ಳೆತ್ತಿದರೆ ಜನ್ಮವನು | ಉತ್ತಮರು ಅಧಮರೆನಬೇಡಿ ಹೊಲೆಯಿಲ್ಲ | ದುತ್ತಮರು ಎಲ್ಲಿ ಸರ್ವಜ್ಞ ||
ಊರು ಸನಿಹದಲಿಲ್ಲ | ನೀರೊಂದು ಗಾವುದವು | ಸೇರಿ ನೆರ್ಅಳಿಲ್ಲ ಬಡಗಲಾ | ದಾರಿಬೇಡೆಂದ ಸರ್ವಜ್ಞ ||