ಒಟ್ಟು 14 ಕಡೆಗಳಲ್ಲಿ , 1 ವಚನಕಾರರು , 13 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಪ್ಪು ಸಪ್ಪನೆಯಕ್ಕು | ಕಪ್ಪುರವು ಕರಿದಿಕ್ಕು | ಸರ್ಪನಿಗೆ ಬಾಲವೆರ್‍ಅಡಕ್ಕು ಸವಣ ತಾ | ತಪ್ಪಾದಿದಂದು ಸರ್ವಜ್ಞ ||
--------------
ಸರ್ವಜ್ಞ
ಕಾಲು ಮುರಿದರೆ ಹೊಲ್ಲ | ಬಾಲೆ ಮುದುಕಗೆ ಹೊಲ್ಲ | ನಾಲಿಗೆಯಲೆರಡು ನುಡಿ ಹೊಲ್ಲ | ಸಮರದಲಿ ಸೋಲುವಡೆ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಕಾಲುಂಟು ನಡೆಯದದು | ಮೂಲೆಯಲಿ ಕಟ್ಟಿಹುದು | ಬಾಲಕರ ಸೊಮ್ಮು ಹೊರತಿಹುದು ಕವಿಗಳಲಿ | ಬಾಲರಿದ ಪೇಳಿ ಸರ್ವಜ್ಞ ||
--------------
ಸರ್ವಜ್ಞ
ನಾಲಿಗೆಯ ಕೀಲವನು | ಶೀಲದಲ್ಲಿ ತಾನರಿದು | ಶೂಲವದು ರುಚಿಯು ಎಂದಿರುವನು ಮುದಿಯಲ್ಲಿ | ಬಾಲನಂತಿಹನು ಸರ್ವಜ್ಞ ||
--------------
ಸರ್ವಜ್ಞ
ಬಾಲ್ಯ - ಯೌವನ ಪ್ರೌಢ | ಲೋಲ ಹಲವಾದ ತನು ಏಳುತ್ತ ಮಡುವುತಿರ ಬೇಡ - ಅನುದಿನವು ಶೊಲಿಯ ನೆನೆಯ ಸರ್ವಜ್ಞ
--------------
ಸರ್ವಜ್ಞ
ಬಾಲ್ಯಯೌವನದೊಳಗೆ | ಲೋಲುಪ್ತನಾಗಿ ನೀ | ನೇಳುತುಲಿ ಮದಿಸುತ್ತಿರಬೇಡ ಅನುದಿನವು | ಸೂಲಿಯನು ನೆನೆಯೋ ಸರ್ವಜ್ಞ ||
--------------
ಸರ್ವಜ್ಞ
ಸಾಲ ಬಡವಗೆ ಹೊಲ್ಲ | ಸೋಲು ಜೂಜಿಗೆ ಹೊಲ್ಲ | ಬಾಲರು ಬೆನ್ನಲಿರ ಹೊಲ್ಲ ಬಡವಂಗೆ | ಓಲಗವೇ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಹತ್ತು ಸಾವಿರ ಕಣ್ಣು | ಕತ್ತಿನಲಿ ಕಿರಿಬಾಲ | ತುತ್ತನೇ ಹಿಡಿದು ತರುತಿಹದು ಕವಿಗಳಿದ | ರರ್ಥವೇನು ಪೇಳಿ ಸರ್ವಜ್ಞ ||
--------------
ಸರ್ವಜ್ಞ
ಹತ್ತು ಸಾವಿರ ಕಣ್ಣು | ನೆತ್ತಿಯಲಿ ಬಾಲವು | ಹತ್ತೆಂಟು ಮಿಕವ ಹಿಡಿಯುವದು ಕವಿಗಳಿದರರ್ಥವನು ಪೇಳಿ ಸರ್ವಜ್ಞ ||
--------------
ಸರ್ವಜ್ಞ
ಹತ್ತು ಸಾವಿರ ಕಣ್ಣು | ನೆತ್ತಿಲಾದರು | ಬಾಲ ಹುತ್ತಿನಾ ಹುಳವ ಹಿಡಿಯುವದು ಕವಿಜನರೆ | ಮೊತ್ತವಿದನ್ಹೇಳಿ ಸರ್ವಜ್ಞ ||
--------------
ಸರ್ವಜ್ಞ
ಹಾಲಿನಾ ಹಸು ಲೇಸು | ಶೀಲದಾ ಶಿಶು ಲೇಸು ಬಾಲೆ | ಸಜ್ಜನೆಯ ಬಲು ಲೇಸು ಹುಸಿಯದಾ | ನಾಲಿಗೆಯು ಲೇಸು ಸರ್ವಜ್ಞ ||
--------------
ಸರ್ವಜ್ಞ
ಹಾಲು ಇಲ್ಲದ ಊಟ | ಬಾಲೆಯರ ಬರಿ ನೋಟ | ಕಾಲಿಲ್ಲದವನ ಹರಿದಾಟ ಕಂಗಳನ | ಕೋಲು ಕಳೆದಂತೆ ಸರ್ವಜ್ಞ ||
--------------
ಸರ್ವಜ್ಞ
ಹಾಲು ಬೋನವು ಲೇಸು | ಮಾಲೆ ಕೊರಳಿಗೆ ಲೇಸು | ಸಾಲವಿಲ್ಲದವನ ಮನೆ ಲೇಸು | ಬಾಲರ ಲೀಲೆ ಲೇಸೆಂದ ಸರ್ವಜ್ಞ ||
--------------
ಸರ್ವಜ್ಞ