ಒಟ್ಟು 13 ಕಡೆಗಳಲ್ಲಿ , 1 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಡಬಲವು ಎನಬೇಡ | ಒಡನೆ ಬಹನೆನಬೇಡ | ಕಡುದೂರ ಸಾರ್ದೆನೆನಬೇಡ ಸೀತರೊಂದಡಿಯ ನಿಡಬೇಡ ಸರ್ವಜ್ಞ ||
--------------
ಸರ್ವಜ್ಞ
ಎಂಬಲವು ಸೌಚವು | ಸಂಜೆಯೆಂದೆನಬೇಡ | ಕುಂಜರವು ವನವ ನೆನೆವಂತೆ ಬಿಡದೆ ನಿ | ರಂಜನನ ನೆನೆಯೋ ಸರ್ವಜ್ಞ ||
--------------
ಸರ್ವಜ್ಞ
ಎಲವು-ಕರಳ್-ನರ-ತೊಗಲು | ಬಿಲರಂದ್ರ-ಮಾಂಸದೊಳು | ಹಲತೆರೆದ ಮಲವು ಸುರಿದಿಲು | ಕುಲಕ್ಕಿನ್ನು | ಬಲವೆಲ್ಲಿ ಹೇಳು ಸರ್ವಜ್ಞ ||
--------------
ಸರ್ವಜ್ಞ
ಎಲುವಿಲ್ಲ ನಾಲಿಗೆಗೆ | ಬಲವಿಲ್ಲ ಬಡವಂಗೆ | ತೊಲೆ ಕಂಭವಿಲ್ಲ ಗಗನಕ್ಕೆ ದೇವರಲಿ | ಕುಲಭೇದವಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಎಲ್ಲ ಬಲ್ಲವರಿಲ್ಲ | ಬಲ್ಲವರು ಬಹಳಿಲ್ಲ | ಬಲ್ಲಿದರು ಇದ್ದು ಬಲವಿಲ್ಲ ಸಾಹಿತ್ಯ | ವೆಲ್ಲವರಿಗಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಕುಲವನ್ನು ಕೆಡಿಸುವದು | ಛಲವನ್ನು ಬಿಡಿಸುವದು | ಹೊಲೆಯನಾ ಮನೆಯ ಹೊಗಿಸುವದು ಕೂಳಿನಾ | ಬಲವ ನೋಡೆಂದ ಸರ್ವಜ್ಞ ||
--------------
ಸರ್ವಜ್ಞ
ಕೊಂಬುವನು ಸಾಲವನು | ಉಂಬುವನು ಲೇಸಾಗಿ | ಬೆಂಬಲವ ಪಿಡಿದು - ಬಂದರಾದೇಗುಲದ | ಕಂಬದಂತಿಹನು ಸರ್ವಜ್ಞ ||
--------------
ಸರ್ವಜ್ಞ
ಚಲುವನಾದಡದೇನು ? | ಬಲವಂತನಹದೇನು ?| ಕುಲವೀರನಾಗಿ ಫಲವೇನು ? ಮಹಲಕ್ಷ್ಮಿ | ತೊಲಗಿ ಹೋಗಿರಲು | ಸರ್ವಜ್ಞ ||
--------------
ಸರ್ವಜ್ಞ
ಬಲವಂತ ನಾನೆಂದು | ಬಲುದು ಹೋರಲು ಬೇಡ | ಬಲವಂತ ವಾಲಿ ಶ್ರೀರಾಮನೊಡನಾಡಿ | ಛಲದಿಂದ ಕೆಟ್ಟ ಸರ್ವಜ್ಞ ||
--------------
ಸರ್ವಜ್ಞ
ಬಲವಂತರಾದವರು | ಕಲಹದಿಂ ಕೆಟ್ಟಿಹರು | ಬಲವಂತ ಬಲಿಯು ದುರ್ಯೋಧನಾದಿಗಳು | ಛಲದಲುಳಿದಿಹರೆ ಸರ್ವಜ್ಞ ||
--------------
ಸರ್ವಜ್ಞ
ಹಣ ಗುಣದಿ ಬಲವುಳ್ಳ | ಕೆಡೆಬೀಳಲಿರಿದರೂ | ನಡುವೆಂದು ಬಗೆದ ಪತಿಪ್ರತೆ ಸೀತೆಗಂ | ಎಣೆಯಾರು ಹೇಳು ಸರ್ವಜ್ಞ ||
--------------
ಸರ್ವಜ್ಞ