ಒಟ್ಟು 8 ಕಡೆಗಳಲ್ಲಿ , 1 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಗ್ಗ ಬಡವಗೆ ಲೇಸು | ಬುಗ್ಗೆಯಗಸಗೆ ಲೇಸು | ತಗ್ಗಿನಾ ಗದ್ದೆ ಉಳಲೇಸು ಜೇಡಂಗೆ | ಮಗ್ಗ ಲೇಸೆಂದ ಸರ್ವಜ್ಞ ||
--------------
ಸರ್ವಜ್ಞ
ಆಡಿಗಟ್ಟಣವೇಕೆ | ಬೋಡಂಗೆ ಕಬ್ಬೇಕೆ | ಕೋಡಗನ ಕೈಯ ಬಳೆಯೇಕೆ ಬಡವಂಗೆ | ನಾಡಮಾತೇಕೆ ಸರ್ವಜ್ಞ ||
--------------
ಸರ್ವಜ್ಞ
ಆಡಿಗಡಿಕೆಯ ಹೊಲ್ಲ | ಗೋಡೆ ಬಿರುಕಲು ಹೊಲ್ಲ | ಒಡಕಿನಾ ಮನೆಯೊಳಿರ ಹೊಲ್ಲ ಬಡವಂಗೆ | ಸಿಡುಕು ತಾ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಉದ್ದು ಮದ್ದಿಗೆ ಹೊಲ್ಲ | ನಿದ್ದೆ ಯೋಗಿಗೆ ಹೊಲ್ಲ | ಬಿದ್ದಿರಲು ಹೊಲ್ಲ ಉದ್ಯೋಗಿ ಬಡವಂಗೆ | ಗುದ್ದಾಟ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಎಲುವಿಲ್ಲ ನಾಲಿಗೆಗೆ | ಬಲವಿಲ್ಲ ಬಡವಂಗೆ | ತೊಲೆ ಕಂಭವಿಲ್ಲ ಗಗನಕ್ಕೆ ದೇವರಲಿ | ಕುಲಭೇದವಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಸಪ್ಪನ್ನ ಉಣಹೊಲ್ಲ | ಮುಪ್ಪು ಬಡವಗೆ ಹೊಲ್ಲ | ತಪ್ಪಿನಲಿಸಿಲುಕಿ ಇರಹೊಲ್ಲ ಜಾರೆಯನು ಅಪ್ಪುವದೆ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಸಾಲ ಬಡವಂಗೆ ಹೊಲ್ಲ | ನಾಲಗೆಗೆ ಹುಸಿ ಹೊಲ್ಲ | ಹಾಲಿನಾ ಕೊಡಕೆ ಹುಳಿಹೊಲ್ಲ ಕಾಲಿಗಂ | ಕೋಲಿ ಹೊಲ್ಲೆಂದ ಸರ್ವಜ್ಞ ||
--------------
ಸರ್ವಜ್ಞ
ಸಾಲ ಬಡವಗೆ ಹೊಲ್ಲ | ಸೋಲು ಜೂಜಿಗೆ ಹೊಲ್ಲ | ಬಾಲರು ಬೆನ್ನಲಿರ ಹೊಲ್ಲ ಬಡವಂಗೆ | ಓಲಗವೇ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ