ಒಟ್ಟು 9 ಕಡೆಗಳಲ್ಲಿ , 1 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಣ್ಣಿನಿಂದಲೆ ಪುಣ್ಯ | ಕಣ್ಣಿನಿಂದಲೆ ಪಾಪ | ಕಣ್ಣಿನಿಂದಿಹವು ಪರವಕ್ಕು ಲೋಕಕ್ಕೆ | ಕಣ್ಣೇ ಕಾರಣವು ಸರ್ವಜ್ಞ ||
--------------
ಸರ್ವಜ್ಞ
ದಿಟವೆ ಪುಣ್ಯದ ಪುಂಜ | ಸಟಿಯೆ ಪಾಪನ ಬೀಜ | ಕುಟಿಲ ವಂಚನೆಗೆ ಪೋಗದಿರು | ನಿಜದಿ ಪಿಡಿ | ಘಟವನೆಚ್ಚರದಿ ಸರ್ವಜ್ಞ ||
--------------
ಸರ್ವಜ್ಞ
ದಿಟವೆ ಪುಣ್ಯದ ಪುಂಜ | ಸಟೆಯೆ ಪಾಪದ ಬೀಜ ಕುಟಿಲ ವಂಚನೆಯ ಪೊಗದಿರು - ನಿಜವ ಪಿಡಿ ಘಟವ ನೆಚ್ಚದಿರು ಸರ್ವಜ್ಞ
--------------
ಸರ್ವಜ್ಞ
ಪಾಪ - ಪುಣ್ಯಗಳೆಂಬ | ತಿಣ್ಣ ಭೇದಗಳಿಂದ | ತಣ್ಣಗೀ ಜಗವು ನಡೆದಿಹುದು ಅಲ್ಲದಡ | ನುಣ್ಣಗಾಗಿಹುದು ಸರ್ವಜ್ಞ ||
--------------
ಸರ್ವಜ್ಞ
ಪಾಪವೆನ್ನದು ಕಾಯ | ಪುಣ್ಯ ನಿನ್ನದು ರಾಯ | ಕೂಪದೊಳು ಬಿದ್ದು ಕೊರಹುತಿಹೆ ಗುರುರಾಯ | ರೂಪುಗೊಳಿಸಯ್ಯ ಸರ್ವಜ್ನ್ಯ ||
--------------
ಸರ್ವಜ್ಞ
ಪುಣ್ಯತನಗುಳ್ಳ ನರ | ಮನ್ನಣೆಯು ಪಿರಿದಕ್ಕು | ಹಣ್ಣಿರ್ದ ಕಾರ್ಯ - ಫಲವಕ್ಕು ಹಿಡಿದಿರ್ದ | ಮಣ್ಣು ಹೊನ್ನಕ್ಕು ಸರ್ವಜ್ಞ ||
--------------
ಸರ್ವಜ್ಞ
ಮುನ್ನ ಮಾಡಿದ ಪಾಪ | ಹೊನ್ನಿನಿಂ ಪೋಪುದೇ ? ಹೊನ್ನಿನಾ ಪುಣ್ಯವದು ಬೇರೆ; ಪಾಪ ತಾ | ಮುನ್ನಿನಂತಿಹುದು ಸರ್ವಜ್ಞ ||
--------------
ಸರ್ವಜ್ಞ
ಲೋಕಕ್ಕವಶ್ಯ ತಾ | ನೇಕಾಕಿ ಹೊಂಬೇರು | ನಾಕಕದು ಬೇರು ಪುಣ್ಯದಿಂದೆಲ್ಲದೊಡೆ | ಪಾತಕಕೆ ಬೇರು ಸರ್ವಜ್ಞ ||
--------------
ಸರ್ವಜ್ಞ
ಹಿಂದೆ ಪಾಪವ ಮಾಡಿ | ಮುಂದೆ ಪುಣ್ಯವು ಹೇಗೆ | ಹಿಂದು - ಮುಂದರಿದು ನಡೆಯದಿರೆ ನರಕದಲಿ ಬೆಂದು ಸಾಯುವನು ಸರ್ವಜ್ಞ ||
--------------
ಸರ್ವಜ್ಞ