ಒಟ್ಟು 10 ಕಡೆಗಳಲ್ಲಿ , 1 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕನ್ಯೆಕ್ಕೆ ಗುರು ಬರಲು | ಚನ್ನಾಗಿ ಮಳೆಯಕ್ಕು | ಚನ್ನಾಗಿ ಪಶುವು ಕರೆಯಕ್ಕು ಮಂಡನದ | ಕನ್ಯೆಯರು ಅಕ್ಕು ಸರ್ವಜ್ಞ ||
--------------
ಸರ್ವಜ್ಞ
ಕರಿಕೆ ಕುದುರೆಗೆ ಲೇಸು | ಮುರಕವು ಹೆಣ್ಣಿಗೆ ಲೇಸು | ಅರಿಕೆಯುಳ್ಳವರ ಕೆಳೆಲೇಸು ಪಶುವಿಂಗೆ | ಗೊರೆಸುಲೇಸೆಂದ ಸರ್ವಜ್ಞ ||
--------------
ಸರ್ವಜ್ಞ
ತಾನಕ್ಕು ಪರನಕ್ಕು ಶ್ವಾನಗರ್ದಭನಕ್ಕು | ವಾನರನು ಅಕ್ಕು ಪಶುವಕ್ಕು ಪಯಣದಲಿ ಸೀನೆ ಭಯವಕ್ಕು ಸರ್ವಜ್ಞ ||
--------------
ಸರ್ವಜ್ಞ
ಮಾಳಗೆಯ ಮನೆ ಲೇಸು | ಗೂಳಿಯಾ ಪಶುಲೇಸು | ಈಳೆಯಾ ಹಿತ್ತಲಿರಲೇಸು | ಪತಿವ್ರತೆಯ ಬಾಳು ಲೇಸೆಂದ ಸರ್ವಜ್ಞ ||
--------------
ಸರ್ವಜ್ಞ
ಮಿಥುನಕ್ಕೆ ಗುರು ಬರಲು | ಮಥನಲೋಕದೊಳಕ್ಕು | ಪೃಥ್ವಿಯೊಳಗೆಲ್ಲ ರುಜವಕ್ಕು ನರಪಶು | ಹಿತವಾಗಲಕ್ಕೂ ಸರ್ವಜ್ಞ ||
--------------
ಸರ್ವಜ್ಞ
ವಿಷಯದಾ ಬೇರನ್ನು | ಬಿಸಿಮಾಡಿ ಕುಡಿದಾತ ಪಶು ಪತಿಯು ಅಕ್ಕ ಶಶಿಯಕ್ಕು ಮೈಯ್ಬಣ್ಣ ಮಿಸಿನಿಯಂತಕ್ಕು ಸರ್ವಜ್ಞ ||
--------------
ಸರ್ವಜ್ಞ
ವೃಷಭನೇರಲು ಗುರುವು | ವಸುಧೆಯೊಳು ಮಳೆಯಕ್ಕು | ಪಶುಸ್ತ್ರೀಯರಿಗೆ ಜಯವಕ್ಕು ಜನರೆಲ್ಲ | ಮಿಸುಯಂತಕ್ಕು ಸರ್ವಜ್ಞ ||
--------------
ಸರ್ವಜ್ಞ
ಹರಿಬ್ರಹ್ಮರೆಂಬವರು | ಹರನಿಂದಲಾದವರು ಅರಸಿಂಗೆ ಆಳು ಸರಿಯಹನೆ - ಪಶುಪತಿಗೆ ಸರಿ ಯಾರ ಕಾಣೆ ಸರ್ವಜ್ಞ
--------------
ಸರ್ವಜ್ಞ
ಹಸಿವು-ತೃಷೆ-ನಿದ್ರೆಗಳು | ವಿಷಯ ಮೈಥುನ ಬಯಕೆ | ಪಶು-ಪಕ್ಷಿ ನರಗೆ ಸಮನಿರಲು ಕುಲವೆಂಬ | ಘಸಣಿಯೆತ್ತಣದು ಸರ್ವಜ್ಞ ||
--------------
ಸರ್ವಜ್ಞ
ಹುಸಿವನಿಂದೈನೂರು | ಪಶುವ ಕೊಂದವ ಲೇಸು | ಶಿಶು ವಧೆಯಮಾಡಿದವ ಲೇಸು ಮರೆಯಲಿ | ದ್ದೆಸೆದರೂ ಲೇಸು ಸರ್ವಜ್ಞ ||
--------------
ಸರ್ವಜ್ಞ