ಒಟ್ಟು 11 ಕಡೆಗಳಲ್ಲಿ , 1 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿತು ಮಾಡಿದ ಪಾಪ | ಮರೆತರದು ಪೋಪುದೇ | ಮರೆತರಾಮರವ ಬಿಡಿಸುವದು ಕೊರೆತೆಯದು | ಅರಿತು ನೋಡೆಂದ ಸರ್ವಜ್ಞ ||
--------------
ಸರ್ವಜ್ಞ
ಉಗರ ತಿದ್ದಿಸುವದದು | ಮುಗುಳುನಗೆ ನಗಿಸುವದು | ಹಗರಣದ ಮಾತ ನಡಿಸುವದು ಬೋನದಾ | ಬಗೆಯ ನೋಡೆಂದ ಸರ್ವಜ್ಞ ||
--------------
ಸರ್ವಜ್ಞ
ಏಡಿಯೇರಲು ಗುರುವು | ನೋಡೆ ಕಡೆ ಮಳೆಯಕ್ಕು | ನಾಡೊಳಗೆಲ್ಲ ಬೆಳೆಯಕ್ಕು ಪ್ರಜೆಗಳು | ಈಡೇರಲಕ್ಕು ಸರ್ವಜ್ಞ ||
--------------
ಸರ್ವಜ್ಞ
ಕಣಕದಾ ಕಡುಬಾಗಿ | ಮಣಕೆಮ್ಮೆ ಹಯನಾಗಿ | ಕುಣಿ ಕುಣಿದು ಕಡವ ಸತಿಯಾಗಿ ಬೆಳವಲದ ಅಣಕ ನೋಡೆಂದ ಸರ್ವಜ್ಞ ||
--------------
ಸರ್ವಜ್ಞ
ಕನ್ನವನ್ನು ಕೊರಿಸುವದು | ಭಿನ್ನವನ್ನು ತರಿಸುವದು | ಬನ್ನದಾ ಸೆರೆಗೆ ಒಯ್ಯುವದು ಒಂದು ಸೇ | ರನ್ನ ನೋಡೆಂದ ಸರ್ವಜ್ಞ ||
--------------
ಸರ್ವಜ್ಞ
ಕಾಯವಿಂದ್ರಯದಿಂದ | ಜೀವವಾಯುವಿನಿಂದ | ಮಾಯೆಯದು ಬೊಮ್ಮನಿಂದೆಂಬುವಾ ನಾಯ | ಬಾಯಿ ನೋಡೆಂದ ಸರ್ವಜ್ಞ ||
--------------
ಸರ್ವಜ್ಞ
ಕಿಚ್ಚುಂಟು ಕೆಸರುಂಟು | ಬೆಚ್ಚನಾ ಮನೆಯುಂಟು | ಇಚ್ಚಗೇ ಬರುವ ಸತಿಯುಂಟು | ಮಲೆನಾಡ ಮೆಚ್ಚ ನೋಡೆಂದ ಸರ್ವಜ್ಞ ||
--------------
ಸರ್ವಜ್ಞ
ಕಿರಿಯಂದಿನಾ ಪಾಪ | ನೆರೆ ಬಂದು ಹೋದೀತೆ | ಅರವಿಂಗೆ ಹಿರಿದು ಕಿರಿದಿಲ್ಲ ಇದನು ನೀ | ನರಿದು ನೋಡೆಂದ ಸರ್ವಜ್ಞ ||
--------------
ಸರ್ವಜ್ಞ
ಕುಲವನ್ನು ಕೆಡಿಸುವದು | ಛಲವನ್ನು ಬಿಡಿಸುವದು | ಹೊಲೆಯನಾ ಮನೆಯ ಹೊಗಿಸುವದು ಕೂಳಿನಾ | ಬಲವ ನೋಡೆಂದ ಸರ್ವಜ್ಞ ||
--------------
ಸರ್ವಜ್ಞ
ಜೋಳದಾ ಬೋನಕ್ಕೆ | ಬೇಳೆಯಾ ತೊಗೆಯಾಗಿ | ಕಾಳೆಮ್ಮೆ ಕರೆದ ಹೈನಾಗಿ ಬೆಳವಲದ ಮೇಳ ನೋಡೆಂದ ಸರ್ವಜ್ಞ ||
--------------
ಸರ್ವಜ್ಞ
ನವಣೆಯಾ ಬೋನಕ್ಕೆ | ಹವಣಾದ ತೊಗೆಯಾಗಿ | ಕವಣೆಗಲ್ಲದಷ್ಟು ಬೆಣ್ಣೆಯಿದರೂಟದಾ | ಹವಣ ನೋಡೆಂದ ಸರ್ವಜ್ಞ ||
--------------
ಸರ್ವಜ್ಞ