ಒಟ್ಟು 12 ಕಡೆಗಳಲ್ಲಿ , 1 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವಾವ ಜೀವವನು | ಹೇವವಿಲ್ಲದೆ ಕೊಂದು | ಸಾವಾಗ ಶಿವನ ನೆನೆಯುವಡೆ | ಅವ ಬಂದು | ಕಾವನೇ ಹೇಳು ಸರ್ವಜ್ಞ ||
--------------
ಸರ್ವಜ್ಞ
ಎಂಜಲು ಶೌಚವು | ಸಂಜೆಯೆಂದೆನ ಬೇಡ ಕುಂಜರ ವನವ ನೆನೆವಂತೆ - ಬಿಡದೆ ನಿ ರಂಜನನ ನೆನೆಯ ಸರ್ವಜ್ಞ delete
--------------
ಸರ್ವಜ್ಞ
ಎಂಬಲವು ಸೌಚವು | ಸಂಜೆಯೆಂದೆನಬೇಡ | ಕುಂಜರವು ವನವ ನೆನೆವಂತೆ ಬಿಡದೆ ನಿ | ರಂಜನನ ನೆನೆಯೋ ಸರ್ವಜ್ಞ ||
--------------
ಸರ್ವಜ್ಞ
ಎಲ್ಲರೂ ಶಿವನೆಂದ | ರೆಲ್ಲಿಹುದು ಭಯವಯ್ಯಾ | ಎಲ್ಲರೂ ಶಿವನ ನೆನೆಯುವಡೆ ಕೈಲಾಸ | ಎಲ್ಲಿಯೇ ಇಹುದು ಸರ್ವಜ್ಞ ||
--------------
ಸರ್ವಜ್ಞ
ಬಾಲ್ಯ - ಯೌವನ ಪ್ರೌಢ | ಲೋಲ ಹಲವಾದ ತನು ಏಳುತ್ತ ಮಡುವುತಿರ ಬೇಡ - ಅನುದಿನವು ಶೊಲಿಯ ನೆನೆಯ ಸರ್ವಜ್ಞ
--------------
ಸರ್ವಜ್ಞ
ಬಾಲ್ಯಯೌವನದೊಳಗೆ | ಲೋಲುಪ್ತನಾಗಿ ನೀ | ನೇಳುತುಲಿ ಮದಿಸುತ್ತಿರಬೇಡ ಅನುದಿನವು | ಸೂಲಿಯನು ನೆನೆಯೋ ಸರ್ವಜ್ಞ ||
--------------
ಸರ್ವಜ್ಞ
ಮನದಲ್ಲಿ ನೆನೆವಂಗೆ | ಮನೆಯೇನು ಮಠವೇನು | ಮನದಲ್ಲಿ ನೆನೆಯದಿರುವವನು | ದೇಗುಲದ ಕೊನೆಯಲ್ಲಿದ್ದೇನು ? | ಸರ್ವಜ್ಞ ||
--------------
ಸರ್ವಜ್ಞ
ಮನೆಯೇನು ವನವೇನು | ನೆನಹು ಇದ್ದರೆ ಸಾಕು | ಮನಮುಟ್ಟಿ ಶಿವನ ನೆನೆಯದವನು ಬೆಟ್ಟದಾ | ಕೊನೆಯಿಲ್ಲಿದ್ದೇನು ಸರ್ವಜ್ಞ ||
--------------
ಸರ್ವಜ್ಞ
ಮುನಿವರನನು ನೆನೆಯುತಿರು | ವಿನಯದಲಿ ನಡೆಯುತಿರು | ವನಿತೆಯರ್ ಬಲೆಗೆ ಸಿಲುಕದಿರು ಬಾಳಿಕೆಯ | ಮನಘನವು ಅಕ್ಕು ಸರ್ವಜ್ಞ ||
--------------
ಸರ್ವಜ್ಞ
ಸಾರವನು ಬಯಸುವದೇ | ಕ್ಷಾರವನು ಬೆರಸುವದು | ಮಾರಸಂಹರನ ನೆನೆಯುವಡೆ ಮೃತ್ಯು ತಾ | ದೂರಕ್ಕೆ ದೂರ ಸರ್ವಜ್ಞ ||
--------------
ಸರ್ವಜ್ಞ
ಹರನಾವ ಕರೆಯದಲೆ | ಪರಿಶಿವನ ನೆನೆಯದಲೆ | ಸ್ಮರಹರನ ಕರುಣವಿಲ್ಲದೆಯೆ ಜಗದೊಳಗೆ ಇರುವದೇ ಕಷ್ಟ ಸರ್ವಜ್ಞ ||
--------------
ಸರ್ವಜ್ಞ
ಹಲವು ಸಂಗದ ತಾಯಿ | ಹೊಲಸು ನಾರುವ ಬಾಯಿ | ಸಲೆ ಸ್ಮರಹರನ ನೆನೆಯದಾ ಬಾಯಿ ನಾಯ್ | ಮಲವ ಮೆದ್ದಂತೆ ಸರ್ವಜ್ಞ ||
--------------
ಸರ್ವಜ್ಞ