ಒಟ್ಟು 14 ಕಡೆಗಳಲ್ಲಿ , 1 ವಚನಕಾರರು , 13 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಡವಿಯಲಿ ತಪದಲ್ಲಿ | ದೃಢತನದೊಳಿದ್ದರೂ| ನುಡಿಯಲ್ಲಿ ಶಿವನ ಮರೆಯುವಡೆ ಗುಡವಿಲ್ಲ | ದಡಗೆಯುಂಡಂತೆ ಸರ್ವಜ್ಞ ||
--------------
ಸರ್ವಜ್ಞ
ಒಡಲ ಹಿಡಿದಾಡದಿರು | ನುಡಿಯ ಹೋಗಾಡದಿರು | ನಡೆಯೊಳೆಚ್ಚರವ ಬಿಡದಲಿರು ಪರಸತಿಯ | ಕಡೆಗೆ ನೋಡದಿರು ಸರ್ವಜ್ಞ ||
--------------
ಸರ್ವಜ್ಞ
ಕಟ್ಟಾಳು ತಾನಾಗಿ | ಬಟ್ಟೆಯಲಿ ನೆರವೇಕೆ ? ಸೆಟ್ಟಿಗಂ ತೊದಲು ನುಡಿಯೇಕೆ ? ಬಲ್ಲಿದಗೆ \ ನಿಷ್ಠುರವದೇಕೆ ? ಸರ್ವಜ್ಞ ||
--------------
ಸರ್ವಜ್ಞ
ಕಷ್ಟಗಳು ಓಡಿಬರ | ಲಿಷ್ಟಕ್ಕೆ ಭಯವೇಕೆ | ಶಿಷ್ಟಂಗೆ ತೊದಲು ನುಡಿಯೇಕೆ | ಕಳ್ಳಂಗೆ ದಟ್ಟಡಿಯದೇಕೆ ಸರ್ವಜ್ಞ ||
--------------
ಸರ್ವಜ್ಞ
ನಿಶ್ಚಯವ ಬಿಡದೊಬ್ಬ | ರಿಚ್ಛೆಯಲಿ ನುಡಿಯದಿರು | ನೆಚ್ಚಿ ಒಂದೊರೊಳಗಿರದಿರು ಶಿವ ನಿನ್ನ ಇಚ್ಛೆಯೊಳಗಿಹನು ಸರ್ವಜ್ಞ ||
--------------
ಸರ್ವಜ್ಞ
ನುಡಿಯಲ್ಲಿ ಎಚ್ಚತ್ತು | ನಡೆಯಲ್ಲಿ ತಪ್ಪಿದರೆ | ಹಿಡಿದಿರ್ಧ ಧರ್ಮ ಹೊಡೆಮರಳಿ ಕಚ್ಚುವಾ | ಹೆಡೆನಾಗನೋಡು ಸರ್ವಜ್ಞ ||
--------------
ಸರ್ವಜ್ಞ
ನೆವದೊಳೆಡೆಯಾಡಿಸುತ | ತವೆ ಸಖನ ನುಡಿಯಿಸುತ | ಕವಿದಿರಲು ಬಗೆದೆ ಚಿನ್ನವ ಪ್ರತಿವೆರಸಿ | ತವಕದಲಿ ತೆಗೆವ ಸರ್ವಜ್ಞ ||
--------------
ಸರ್ವಜ್ಞ
ಪುಷ್ಪ ವಿಲ್ಲದ ಪೂಜೆ | ಅಶ್ವವಿಲ್ಲದ ಅರಸು | ಒಪ್ಪಲೊಲ್ಲವಳ ನಗೆನುಡಿಯು ಇವು ಮೂರು | ಚಪ್ಪೆ ಕಾಣಯ್ಯ ಸರ್ವಜ್ಞ ||
--------------
ಸರ್ವಜ್ಞ
ಬಡವನೊಂದೊಳು ನುಡಿಯ ನುಡಿದಿಹರೆ ನಿಲ್ಲದದು | ಕೊಡೆಯನೆಳಲಾತ ನುಡಿದಿಹರೆ ನಾಯಕನ | ನುಡಿಯಂಬರೆಲ್ಲ ಸರ್ವಜ್ಞ ||
--------------
ಸರ್ವಜ್ಞ
ಬಂಡುಣಿಗಳಂತಿಹರು | ಭಂಡನೆರೆ ಯಾಡುವರು ಕಂಡುದನು ಅರಿದು ನುಡಿಯರಾ ಹಾರುವರು | ಭಂಡರೆಂದರಿಗು ಸರ್ವಜ್ಞ ||
--------------
ಸರ್ವಜ್ಞ
ಬೇಗೆಯೊಳು ಹೋಗದಿರು | ಮೂಕರೊಳು ನುಡಿಯದಿರು | ಆಗದರ ನಂಬಿ ಕೆಡದೆ ಇರು ನಡುವಿರಳು | ಹೋಗದಿರು ಪಯಣ ಸರ್ವಜ್ಞ ||
--------------
ಸರ್ವಜ್ಞ
ಮಾತಿನಿಂ ನಗೆ-ನುಡಿಯು | ಮಾತಿನಿಂ ಹಗೆ ಕೊಲೆಯು | ಮಾತಿನಿಂ ಸರ್ವ ಸಂಪದವು ಲೋಕಕ್ಕೆ | ಮಾತೆ ಮಾಣಿಕವು ಸರ್ವಜ್ಞ ||
--------------
ಸರ್ವಜ್ಞ
ಮೆಚ್ಚಿಸುವದೊಲಿದವರ | ಇಚ್ಛೆಯನೆ ನುಡಿಯುವದು ತುಚ್ಛದಿಂದಾರ ನುಡಿದಿಹರೆ ಅವನಿರವು | ಬಿಚ್ಚುವಂತಕ್ಕು ಸರ್ವಜ್ಞ ||
--------------
ಸರ್ವಜ್ಞ