ಒಟ್ಟು 11 ಕಡೆಗಳಲ್ಲಿ , 1 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಳ್ಳವನು ನುಡಿದಿಹರೆ | ಒಳ್ಳಿತೆಂದೆನ್ನುವರು | ಇಲ್ಲದಾ ಬಡವ ನುಡಿದಿಹರೆ | ಬಾಯೊಳಗೆ | ಹಳ್ಳು ಕಡಿದಂತೆ ಸರ್ವಜ್ಞ ||
--------------
ಸರ್ವಜ್ಞ
ಕಂಡುದನು ಆಡೆ ಭೂ | ಮಂಡಲವು ಮುನಿಯುವುದು | ಕೊಂಡಾಡುತಿಚ್ಚೆ ನುಡಿದಿಹರೆ ಜಗವೆಲ್ಲ ಮುಂಡಾಡುತಿಹುದು ಸರ್ವಜ್ಞ ||
--------------
ಸರ್ವಜ್ಞ
ಪ್ರಸ್ತಕ್ಕೆ ನುಡಿದಿಹರೆ | ಬೆಸ್ತಂತೆ ಇರಬೇಕು | ಪ್ರಸ್ತವನು ತಪ್ಪಿ ನುಡಿದಿಹರೆ | ನಡುಬೆನ್ನಿ ನಸ್ತಿ ಮುರಿದಂತೆ ಸರ್ವಜ್ಞ ||
--------------
ಸರ್ವಜ್ಞ
ಬಡವನೊಂದೊಳು ನುಡಿಯ ನುಡಿದಿಹರೆ ನಿಲ್ಲದದು | ಕೊಡೆಯನೆಳಲಾತ ನುಡಿದಿಹರೆ ನಾಯಕನ | ನುಡಿಯಂಬರೆಲ್ಲ ಸರ್ವಜ್ಞ ||
--------------
ಸರ್ವಜ್ಞ
ಬಲ್ಲಿದನು ನುಡಿದಿಹರೆ | ಬೆಲ್ಲವನು ಮೆದ್ದಂತೆ | ಇಲ್ಲದಾ ಬಡವ ನುಡಿದಿಹರೆ - ಬಾಯಿಂದ | ಜೊಲ್ಲು ಬಿದ್ದಂತೆ ಸರ್ವಜ್ಞ ||
--------------
ಸರ್ವಜ್ಞ
ಮೆಚ್ಚಿಸುವದೊಲಿದವರ | ಇಚ್ಛೆಯನೆ ನುಡಿಯುವದು ತುಚ್ಛದಿಂದಾರ ನುಡಿದಿಹರೆ ಅವನಿರವು | ಬಿಚ್ಚುವಂತಕ್ಕು ಸರ್ವಜ್ಞ ||
--------------
ಸರ್ವಜ್ಞ
ಹೊಲಬನರಿಯದ ಮಾತು | ತಲೆ ಬೇನೆ ಎನಬೇಡ | ಹೊಲಬನರಿತೊಂದ ನುಡಿದಿಹರೆ ಅದು ದಿವ್ಯ | ಫಲ ಪಕ್ವದಂತೆ ಸರ್ವಜ್ಞ ||
--------------
ಸರ್ವಜ್ಞ