ಒಟ್ಟು 8 ಕಡೆಗಳಲ್ಲಿ , 1 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಲಿಲ್ಲದಲೆ ಹರಿಗು | ತೋಳಿಲ್ಲದಲೆ ಹೊರುಗು | ನಾಲಿಗೆಯಿಲ್ಲದಲೆ ಉಲಿಯುವದು ಕವಿಕುಲದ | ಮೇಲುಗಳೇ ಪೇಳಿ ಸರ್ವಜ್ಞ ||
--------------
ಸರ್ವಜ್ಞ
ಕಾಲು ಮುರಿದರೆ ಹೊಲ್ಲ | ಬಾಲೆ ಮುದುಕಗೆ ಹೊಲ್ಲ | ನಾಲಿಗೆಯಲೆರಡು ನುಡಿ ಹೊಲ್ಲ | ಸಮರದಲಿ ಸೋಲುವಡೆ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ನಾಲಿಗೆಯ ಕಟ್ಟಿದನು | ಕಾಲನಿಗೆ ದೂರನಹ | ನಾಲಿಗೆಯು ರುಚಿಯ ಮೇಲಾಡುತಿರಲವನ | ಕಾಲ ಹತ್ತಿರವು ಸರ್ವಜ್ಞ ||
--------------
ಸರ್ವಜ್ಞ
ನಾಲಿಗೆಯ ಕೀಲವನು | ಶೀಲದಲ್ಲಿ ತಾನರಿದು | ಶೂಲವದು ರುಚಿಯು ಎಂದಿರುವನು ಮುದಿಯಲ್ಲಿ | ಬಾಲನಂತಿಹನು ಸರ್ವಜ್ಞ ||
--------------
ಸರ್ವಜ್ಞ
ಮೆಟ್ಟಿರಿಯೆ ಜೀವ ತಾ | ತಟ್ಟನೇ ಹೋಗುವದು | ಕೆಟ್ಟನಾಲಿಗೆಯಲಿರಿಹರೆ ಕಾದು ನೀ | ರಟ್ಟಿ ಹೋದಂತೆ ಸರ್ವಜ್ಞ ||
--------------
ಸರ್ವಜ್ಞ
ಹಲ್ಲು ನಾಲಿಗೆಯಿಲ್ಲ | ಸೊಲ್ಲು ಸೋಜಿಗವಲ್ಲ | ಕೊಲ್ಲದೇ ಮೃಗವ ಹಿಡಿಯುವದು ಲೋಕದೊಳ | ಗೆಲ್ಲ ಠಾವಿನಲಿ ಸರ್ವಜ್ಞ ||
--------------
ಸರ್ವಜ್ಞ
ಹಾಲಿನಾ ಹಸು ಲೇಸು | ಶೀಲದಾ ಶಿಶು ಲೇಸು ಬಾಲೆ | ಸಜ್ಜನೆಯ ಬಲು ಲೇಸು ಹುಸಿಯದಾ | ನಾಲಿಗೆಯು ಲೇಸು ಸರ್ವಜ್ಞ ||
--------------
ಸರ್ವಜ್ಞ