ಒಟ್ಟು 10 ಕಡೆಗಳಲ್ಲಿ , 1 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಕ್ಕರವ ಕಲಿತಾತ | ಒಕ್ಕಲನು ತಿನಗಲಿತ | ಲೆಕ್ಕವನು ಕಲಿತ ಕರಣಿಕನು ನರಕದಲಿ | ಹೊಕ್ಕಾಡ ಕಲಿತ ಸರ್ವಜ್ಞ ||
--------------
ಸರ್ವಜ್ಞ
ಕೊಲ್ಲದಿರ್ಪಾಧರ್ಮ | ವೆಲ್ಲರಿಗೆ ಸಮ್ಮತವು | ಅಲ್ಲದನು ಮೀರಿ ಕೊಲ್ಲುವನು ನರಕಕ್ಕೆ | ನಿಲ್ಲದಲೆ ಹೋದ ಸರ್ವಜ್ಞ ||
--------------
ಸರ್ವಜ್ಞ
ಕೋಳಿಗಳ ಹಂದಿಗಳ | ಮೇಳದಲಿ ತಾ ಸಾಕಿ | ಏಳುತಲೆ ಕರೆದು ಬಡಿತಿಂದ ಪಾಪಿಗಳ | ಬಾಳೆಲ್ಲ ನರಕ ಸರ್ವಜ್ಞ ||
--------------
ಸರ್ವಜ್ಞ
ಜ್ವರ ಬನ್ದ ಮನುಜಂಗೆ | ನೊರೆವಾಲು ವಿಷಕ್ಕು | ನರಕದಲಿ ಬೀಳ್ವ ಅಧಮಂಗ ಶಿವಭಕ್ತಿ | ಹಿರಿದು ವಿಷಪಕ್ಕು ಸರ್ವಜ್ಞ ||
--------------
ಸರ್ವಜ್ಞ
ತರುಕರವು ಇರದೂರು | ನರಕಭಾಜನಮಕ್ಕು | ತರುಕರುಂಟಾದರುಣಲುಂಟು ಜಗವೆಲ್ಲ | ತರುಕರವೇ ದೈವ ಸರ್ವಜ್ಞ ||
--------------
ಸರ್ವಜ್ಞ
ನರಕ ಪಾಪಿಷ್ಠರಿಗೆ | ಸುರಲೋಕ ( ದಿಟ್ಟರಿಗೆ ) ಗುರುಬೋಧೆಯಲ್ಲಿ ಜಗ ಉಳಿಗು - ಮಲ್ಲದೊಡೆ ಉರಿದು ಹೋಗುವುದು ಸರ್ವಜ್ಞ
--------------
ಸರ್ವಜ್ಞ
ನರಹತ್ಯವೆಂಬುದು | ನರಕದಾ ನಡುಮನೆಯು | ಗುರು ಶಿಶುವು ನರರ ಹತ್ಯವನು ಮಾಡಿದನ | ಇರವು ರೌರವವು ಸರ್ವಜ್ಞ ||
--------------
ಸರ್ವಜ್ಞ
ಸಾಯ್ವುದವಸರವೆ ಮನ | ಠಾಯಿಯಲಿ ನೋವುತ್ತೆ ನಾಯಾಗಿ ನರಕ ಉಣಬೇಡ - ಓಂ ನಮಶ್ಯಿ ವಾಯಯೇಂದನ್ನಿ ಸರ್ವಜ್ಞ
--------------
ಸರ್ವಜ್ಞ
ಹಾರುವರು ಎಂಬವರು | ಹಾರುವರು ನರಕಕ್ಕೆ | ಸಾರದ ನಿಜವನರಿಯದಿರೆ ಸ್ವರ್ಗದಾ | ದಾರಿಯ ಮಾರ್ಗಹುದೆ ಸರ್ವಜ್ಞ ||
--------------
ಸರ್ವಜ್ಞ
ಹಿಂದೆ ಪಾಪವ ಮಾಡಿ | ಮುಂದೆ ಪುಣ್ಯವು ಹೇಗೆ | ಹಿಂದು - ಮುಂದರಿದು ನಡೆಯದಿರೆ ನರಕದಲಿ ಬೆಂದು ಸಾಯುವನು ಸರ್ವಜ್ಞ ||
--------------
ಸರ್ವಜ್ಞ