ಒಟ್ಟು 10 ಕಡೆಗಳಲ್ಲಿ , 1 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವ ಕಾಲವು ವನದಿ | ಜೀವಕಾಲದ ಕಳೆದು | ಜೀವಚಯದಲ್ಲಿ ದಯವಿಲ್ಲದಿರುವವನ | ಕಾಯ್ವ ಶಿವನು ಸರ್ವಜ್ಞ ||
--------------
ಸರ್ವಜ್ಞ
ಇಪ್ಪೊತ್ತು ದೇವರನು | ತಪ್ಪದಲೆ ನೆನದಿಹರೆ | ತುಪ್ಪ ಒರಗವು ಉಣಲುಂಟು ತನಗೊಬ್ಬ | ಳಪ್ಪುವಳುಂಟು ಸರ್ವಜ್ಞ ||
--------------
ಸರ್ವಜ್ಞ
ಜ್ಞಾದಿಂದಲಿ ಇಹವು | ಜ್ಞಾನದಿಂದಲಿ ಪರವು | ಜ್ಞಾನವಿಲ್ಲದಲೆ ಸಕಲವೂ ತನಗಿದ್ದು | ಹಾನಿ ಕಾಣಯ್ಯ ಸರ್ವಜ್ಞ ||
--------------
ಸರ್ವಜ್ಞ
ಜ್ಞಾನದಿಂ ಮೇಲಿಲ್ಲ | ಶ್ವಾನನಿಂ ಕೀಳಿಲ್ಲ | ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ | ಜ್ಞಾನವೇ ಮೇಲು ಸರ್ವಜ್ಞ ||
--------------
ಸರ್ವಜ್ಞ
ಪರಸ್ತ್ರೀಯ ಗಮನದಿಂ | ಪರಲೋಕವದು ಹಾನಿ | ಸಿರಿತಗ್ಗಿ ತಲೆಯು ತೊಲಗಿತಾ ರಾವಣಗೆ | ನರಲೋಕದಲ್ಲಿ ಸರ್ವಜ್ಞ ||
--------------
ಸರ್ವಜ್ಞ
ಲೆಕ್ಕಕ್ಕೆ ಕಕ್ಕಿಲ್ಲ | ಬೆಕ್ಕಿಗಂ ವ್ರತವಿಲ್ಲ | ಸಿಕ್ಕು ಬಂಧನದಿ ಸುಖವಿಲ್ಲ ನಾರಿಗಂ | ಸಿಕ್ಕದವರಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಸಂಗದಿಂ ಕೆಳೆಯಿಲ್ಲ | ಬಿಂಗದಿಂ ಹೊರೆಯಿಲ್ಲ ಗಂಗೆಯಿಂದಧಿಕ ನದಿಯಿಲ್ಲ - ಪರದೈವ ಲಿಂಗದಿಂದಿಲ್ಲ ಸರ್ವಜ್ಞ
--------------
ಸರ್ವಜ್ಞ
ಸಂಗದಿಂ ಕೆಳೆಯಿಲ್ಲಿ | ಭಂಗದಿಂ ವ್ಯಥೆಯಿಲ್ಲ | ಗಂಗೆಯಿಂದಧಕ ನದಿಯಲ್ಲಿ ಪರದೈವ | ಲಿಂಗದಿಂದಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಸುರುತರುವು ಸುರಧೇನು | ಸುರಮಣೆ ಸೌರಲತೆ ಪರುಷಷ್ಟತನುವು ಹರಿವ ನದಿ - ಯೆಲ್ಲವು ಪರಮನಿಂ ಜನನ ಸರ್ವಜ್ಞ
--------------
ಸರ್ವಜ್ಞ
ಹದ ಬೆದೆಯಲಾರಂಭ | ಕದನಲಿ ಕೂರಂಬ | ನದಿ ಹಾಯುವಲಿ ಹರಗೋಲ ಮರೆತು | ವಿಧಿಯ ಬೈದರೇನು ಫಲ ಸರ್ವಜ್ಞ ||
--------------
ಸರ್ವಜ್ಞ