ಒಟ್ಟು 10 ಕಡೆಗಳಲ್ಲಿ , 1 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಷ್ಟದಳಕಮಲದಲಿ | ಕಟ್ಟಿತಿರುಗುವ ಹಂಸ | ಮೆಟ್ಟುವಾ ದಳವ ನಡುವಿರಲಿ ಇರುವದನು | ಮುಟ್ಟುವನೆ ಯೋಗಿ ಸರ್ವಜ್ನ್ಯ ||
--------------
ಸರ್ವಜ್ಞ
ಎಡವಿ ಬಟ್ಟೊಡೆದರೂ | ಕೆಡೆಬೀಳಲಿರಿದರೂ | ನಡು ಬೆನ್ನಿನಲಗು ಮುರಿದರೂ ಹಾದರದ | ಕಡಹು ಬಿಡದೆಂದ ಸರ್ವಜ್ಞ ||
--------------
ಸರ್ವಜ್ಞ
ಕಡತಂದೆನಲ್ಲದೇ | ಹಿಡಿ ಕಳವ ಕದ್ದೆನೇ | ತಡವಲುರೆ ಬೈದು ತೆಗೆದಾನು ಸಾಲಿಗನು | ನಡುವೆ ಜಗಳವನು ಸರ್ವಜ್ಞ ||
--------------
ಸರ್ವಜ್ಞ
ನಡೆವುದೊಂದೇ ಭೂಮಿ | ಕುಡಿವುದೊಂದೇ ನೀರು | ಸುಡುವಗ್ನಿಯೊಂದೇ ಇರುತಿರೆ ಕುಲಗೋತ್ರ | ನಡುವೆ ಎತ್ತಣದು ಸರ್ವಜ್ಞ ||
--------------
ಸರ್ವಜ್ಞ
ನರಹತ್ಯವೆಂಬುದು | ನರಕದಾ ನಡುಮನೆಯು | ಗುರು ಶಿಶುವು ನರರ ಹತ್ಯವನು ಮಾಡಿದನ | ಇರವು ರೌರವವು ಸರ್ವಜ್ಞ ||
--------------
ಸರ್ವಜ್ಞ
ಪ್ರಸ್ತಕ್ಕೆ ನುಡಿದಿಹರೆ | ಬೆಸ್ತಂತೆ ಇರಬೇಕು | ಪ್ರಸ್ತವನು ತಪ್ಪಿ ನುಡಿದಿಹರೆ | ನಡುಬೆನ್ನಿ ನಸ್ತಿ ಮುರಿದಂತೆ ಸರ್ವಜ್ಞ ||
--------------
ಸರ್ವಜ್ಞ
ಬೇಗೆಯೊಳು ಹೋಗದಿರು | ಮೂಕರೊಳು ನುಡಿಯದಿರು | ಆಗದರ ನಂಬಿ ಕೆಡದೆ ಇರು ನಡುವಿರಳು | ಹೋಗದಿರು ಪಯಣ ಸರ್ವಜ್ಞ ||
--------------
ಸರ್ವಜ್ಞ
ಮಾಸನೂರ ಬಸವರಸ | ಕೊಸನಿಶನ ಕೇಳಲು ಕಾಶಿಯೀಶನೊಳು ಪಡೆದ ವರ - ವಧು ನಡುವೆ ಸೂಸಿತೆಂತಲು ಸರ್ವಜ್ಞ
--------------
ಸರ್ವಜ್ಞ
ಸುಟ್ಟ ಬೆಳಸಿಯು ಲೇಸು | ಅಟ್ಟ ಬೊನವು ಲೇಸು | ಕಟ್ಟಾಣೆ ಸತಿಯು ಇರಲೇಸು ನಡುವಿಂಗೆ | ದಟ್ಟಿ ಲೇಸೆಂದ ಸರ್ವಜ್ಞ ||
--------------
ಸರ್ವಜ್ಞ
ಹಣ ಗುಣದಿ ಬಲವುಳ್ಳ | ಕೆಡೆಬೀಳಲಿರಿದರೂ | ನಡುವೆಂದು ಬಗೆದ ಪತಿಪ್ರತೆ ಸೀತೆಗಂ | ಎಣೆಯಾರು ಹೇಳು ಸರ್ವಜ್ಞ ||
--------------
ಸರ್ವಜ್ಞ