ಒಟ್ಟು 14 ಕಡೆಗಳಲ್ಲಿ , 1 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರಯ್ದು ನುಡಿವವನು | ಆರಯ್ದು ನಡೆವವನು | ಆರಯ್ದು ಪದವ ನಿಡುವವನು ಲೋಕಕ್ಕೆ ಆರಾಧ್ಯನಕ್ಕು ಸರ್ವಜ್ಞ ||
--------------
ಸರ್ವಜ್ಞ
ಆಸನವು ದೃಢವಾಗಿ | ನಾಶಿಕಾಗ್ರದಿ ದಿಟ್ಟು | ಸೂಸವ ಮನವ ಫನದಲಿರಿಸಿದನು ಜಗ | ದೀಶ ತಾನಕ್ಕು ಸರ್ವಜ್ಞ ||
--------------
ಸರ್ವಜ್ಞ
ಐವರಟ್ಟಾಸವನ | ಯೌವನದ ಹಿಂಡನ್ನು | ಹೊಯ್ಯುತ್ತ ವಶಕ್ಕೆ ತಂದಾತ ಜಗದೊಳಗೆ | ದೈವ ತಾನಕ್ಕು ಸರ್ವಜ್ಞ ||
--------------
ಸರ್ವಜ್ಞ
ಕುರಿಯನೇರಲು ಗುರುವು | ಧರೆಗೆ ಹೆಮ್ಮೆಳೆಯಕ್ಕು | ಪರಿಪರಿಯ ಧಾನ್ಯ ಬೆಳೆಯಕ್ಕು ಪ್ರಜೆಗಳೆಗೆ | ಕರೆಯಲ್ಹಯನಕ್ಕು ಸರ್ವಜ್ಞ ||
--------------
ಸರ್ವಜ್ಞ
ತಾನಕ್ಕು ಪರನಕ್ಕು ಶ್ವಾನಗರ್ದಭನಕ್ಕು | ವಾನರನು ಅಕ್ಕು ಪಶುವಕ್ಕು ಪಯಣದಲಿ ಸೀನೆ ಭಯವಕ್ಕು ಸರ್ವಜ್ಞ ||
--------------
ಸರ್ವಜ್ಞ
ಪವನಪರಿಯರಿದಂಗೆ | ಶಿವನ ಸಾಧಿಸಲಕ್ಕು | ಭವಮಾಲೆ ಹರಿದು ಸುಖಿಸುವೊಡೆ ಅವ ಸದಾಶಿವನು ತಾನಕ್ಕು ಸರ್ವಜ್ಞ ||
--------------
ಸರ್ವಜ್ಞ
ಪುಣ್ಯತನಗುಳ್ಳ ನರ | ಮನ್ನಣೆಯು ಪಿರಿದಕ್ಕು | ಹಣ್ಣಿರ್ದ ಕಾರ್ಯ - ಫಲವಕ್ಕು ಹಿಡಿದಿರ್ದ | ಮಣ್ಣು ಹೊನ್ನಕ್ಕು ಸರ್ವಜ್ಞ ||
--------------
ಸರ್ವಜ್ಞ
ಬೆಕ್ಕು ಮನೆಯೊಳು ಲೇಸು | ಮುಕ್ಕು ಕಲ್ಲಿಗೆ ಲೇಸು | ನಕ್ಕು ನಗಿಸುವಾ ನುಡಿಲೇಸು ಊರಿಂಗೆ | ಒಕ್ಕಲಿಗ ಲೇಸು ಸರ್ವಜ್ಞ ||
--------------
ಸರ್ವಜ್ಞ
ಮೀನಕ್ಕೆ ಶನಿ ಬರಲು | ಶಾನೆ ಕಾಳಗವಕ್ಕು | ಬೇನೆ ಬಂಧಾನಗಳು ತಾವಕ್ಕು ಬರನಕ್ಕು ಲೋಕಕ್ಕೆ | ಹಾನಿಯೇ ಬಕ್ಕು ಸರ್ವಜ್ಞ ||
--------------
ಸರ್ವಜ್ಞ
ಸತ್ತವರಿಗತ್ತು ಬೇ | ಸತ್ತರವರುಳಿವರೇ | ಹತ್ತೆಂಟು ಕಾಲ ತಡನಕ್ಕು ಬಳಿಕೆಗೆಲ್ಲ | ರತ್ತಲೇ ಅಕ್ಕು ಸರ್ವಜ್ಞ ||
--------------
ಸರ್ವಜ್ಞ
ಹರಿವ ಹಕ್ಕಿ ನುಂಗಿ | ನೊರೆವಾಲ ಕುಡಿದಾತ | ಹರಿಹರನು ಅಕ್ಕು ಅಜನಕ್ಕು ಲೋಕಕ್ಕೆ | ಇರುವು ತಾನಕ್ಕು ಸರ್ವಜ್ಞ ||
--------------
ಸರ್ವಜ್ಞ