ಒಟ್ಟು 7 ಕಡೆಗಳಲ್ಲಿ , 1 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಧಕನು ನಿಂದಿರಲು | ಮುಂದೆ ಬಪ್ಪರ ಕಾಣ | ಬಂದರೆ ಬಾರೆಂದೆನರ್ಪ ಗರ್ವಿಯಾ | ದಂದುಗನೆ ಬೇಡ ಸರ್ವಜ್ಞ ||
--------------
ಸರ್ವಜ್ಞ
ಉಪ್ಪು ಸಪ್ಪನೆಯಕ್ಕು | ಕಪ್ಪುರವು ಕರಿದಿಕ್ಕು | ಸರ್ಪನಿಗೆ ಬಾಲವೆರ್‍ಅಡಕ್ಕು ಸವಣ ತಾ | ತಪ್ಪಾದಿದಂದು ಸರ್ವಜ್ಞ ||
--------------
ಸರ್ವಜ್ಞ
ಬಿಂದುವ ಬಿಟ್ಟು ಹೋ | ದಂದು ಬಸುರಾದಳವ ಳಂದದಿಯಷ್ಟಾದಶ ಮಾಸ - ಉದರದಲಿ ನಿಂದು ನಾ ಬೆಳೆದೆ ಸರ್ವಜ್ಞ
--------------
ಸರ್ವಜ್ಞ
ಮನ ಭಂಗವಾದಂದು | ಘನನಿದ್ರೆ ಹೋದಂದು | ವನಿತೆಯರು ಸುತರು ಜರಿದಂದು ಮರಣವೇ | ತನಗೆ ಬಂತೆಂದ ಸರ್ವಜ್ಞ ||
--------------
ಸರ್ವಜ್ಞ
ಸಂದ ಮೇಲ್ಸುಡುವದು | ಬೆಂದಮೇಲುರಿವುದು | ಬಂಧಗಳನೆದ್ದು ಬಡಿವುದು ನೀವದರ | ದಂದುಗವ ನೋಡಿ ಸರ್ವಜ್ಞ ||
--------------
ಸರ್ವಜ್ಞ