ಒಟ್ಟು 6 ಕಡೆಗಳಲ್ಲಿ , 1 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗವುಡನೊಳು ಹಗೆತನವು | ಕಿವುಡನೊಳು ಏಕಾಂತ | ಪ್ರವುಢನೊಳೂ ಮೂಡನುಪದೇಶ ಹಸುವಿಗೆ | ತವುಡನಿಟ್ಟಂತೆ ಸರ್ವಜ್ಞ ||
--------------
ಸರ್ವಜ್ಞ
ತುಂಬಿದಾ ಕೆರೆ ಭಾವಿ | ತುಂಬಿದಂತಿರುವದೇ | ನಂಬಿರಲು ಬೇಡ ಲಕ್ಶ್ಮಿಯನು ಬಡತನವು | ಬೆಂಬಿಡದೆ ಬಹುದು ಸರ್ವಜ್ಞ ||
--------------
ಸರ್ವಜ್ಞ
ನಟ್ಟಡವಿಯಾ ಮಳೆಯು | ದುಷ್ಟರಾ ಗೆಳೆತನವು | ಕಪ್ಪೆಯಾದವಳ ತಲೆಬೇನೆ ಇವು ಮೂರು ಕೆಟ್ಟರೇ ಲೇಸು ಸರ್ವಜ್ಞ ||
--------------
ಸರ್ವಜ್ಞ
ಬಡವ ಬಟ್ಟೆಯ ಹೋಗ | ಲೊಡನೆ ಸಂಗಡಿಗೇಕೆ ? ಬಡತನವು ಎಂಬ ಹುಲಿಗೂಡಿ ಬರುವಾಗ | ನುಡಿಸುವವರಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಮನವು ಮುಟ್ಟಲು ಗಂಡು | ತನವು ಸೋಂಕಲು ಪಾಪ ಮನವೇಕದಿಂದ ಗುರುಚರಣ - ಸೋಂಕಿದೊಡೆ ತನು ಶುದ್ದವಯ್ಯ ಸರ್ವಜ್ಞ
--------------
ಸರ್ವಜ್ಞ
ಹಾಸು ಇಲ್ಲದ ನಿದ್ರೆ | ಪೂಸು ಇಲ್ಲದ ಮೀಹ | ಭಾಷೆಯರಿಯದಳ ಗೆಳೆತನವು ಮೋಟಕ್ಕೆ | ಬೀಸಿ ಕರದಂತೆ ಸರ್ವಜ್ಞ ||
--------------
ಸರ್ವಜ್ಞ