ಒಟ್ಟು 3 ಕಡೆಗಳಲ್ಲಿ , 1 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಡನೊಬ್ಬಗೆ ಬಗೆದು | ಕೇಡು ತಪ್ಪದು ತನಗೆ | ನೋಡಿ ಕೆಂಡವನು ಹಿಡಿದೊಗೆದು ನೋವ ತಾ | ಬೇಲಿ ಬಗೆದಂತೆ ಸರ್ವಜ್ಞ ||
--------------
ಸರ್ವಜ್ಞ
ಮನ ಭಂಗವಾದಂದು | ಘನನಿದ್ರೆ ಹೋದಂದು | ವನಿತೆಯರು ಸುತರು ಜರಿದಂದು ಮರಣವೇ | ತನಗೆ ಬಂತೆಂದ ಸರ್ವಜ್ಞ ||
--------------
ಸರ್ವಜ್ಞ
ಹಾಸಾಂಗಿ ಹರೆಯುವಡೆ | ದಾಸಿಯರು ದೊರೆಯುವಡೆ ವೀಸಕ್ಕೆ ವೀಸ ಕೊಡುವಡೆ ಅದು ತನಗೆ | ಈಶನ ಒಲುಮೆ ಸರ್ವಜ್ಞ ||
--------------
ಸರ್ವಜ್ಞ