ಒಟ್ಟು 45 ಕಡೆಗಳಲ್ಲಿ , 1 ವಚನಕಾರರು , 37 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅಕ್ಕಿಯಿಂ ತೆಂಗು ಜಾ | ನಕಿಯಿಂದ ಲಂಕೆಯೂ | ಮೆಕ್ಕಿಯಿಂ ಕಣಕ ಕೆಡುವಂತೆ ದುರ್ಬುದ್ಧಿ | ಹೊಕ್ಕಲ್ಲಿ ಕೇಡು ಸರ್ವಜ್ಞ ||
ಎಲ್ಲಿ ನೋಡಿದಡಲ್ಲಿ | ಟೊಳ್ಳು ಜಾಲಿ ಮುಳ್ಳು | ಉಳ್ಳವರು ಎಲ್ಲ ಕಿಸವಾಯಿ ಬಡಲಾ | ತಳ್ಳಿ ಬೇಡೆಂದ ಸರ್ವಜ್ಞ ||
ಒಲೆಗುಂಡನೊಬ್ಬನೇ | ಮೆಲಬಹುದು ಎನ್ನುವಡೆ | ಮೆಲಭುದು ಎಂಬುವನೆ ಜಾಣ ಮೂರ್ಖನಂ | ಗೆಲಲಾಗದಯ್ಯ ಸರ್ವಜ್ಞ ||
ಕಳ್ಳನೂ ಒಳ್ಳಿದನು | ಎಲ್ಲ ಜಾತಿಯೊಳಿಹರು | ಕಳ್ಳನೊಂದೆಡೆಗೆ ಉಪಕಾರಿ ಪಂಚಾಳ | ನೆಲ್ಲರಲಿ ಕಳ್ಳ ಸರ್ವಜ್ಞ ||
ಜಾಜಿಯಾ ಹೂ ಲೇಸು | ತೇಜಿವಾಹನ - ಲೇಸು | ರಾಜಮಂದಿರದೊಳಿರಲೇಸು ತಪ್ಪುಗಳ | ಮಾಜುವದು ಲೇಸು ಸರ್ವಜ್ಞ ||
ಜಾಣ ಜಾಣಗೆ ಲೇಸು | ಕೋಣ ಕೋಣಗೆ ಲೇಸು | ನಾಣ್ಯವದು ಲೇಸು ಜನರಿಂಗೆ ಊರಿಂಗೆ | ಗಾಣಿಗನು ಲೇಸು ಸರ್ವಜ್ಞ ||
ಜಾಣೆಯಾ ನುಡಿ ಲೇಸು | ವೀಣೆಯಾ ಸ್ವರ ಲೇಸು | ಮಾಣದಲೆ ವದನ ಶುಚಿ ಲೇಸು | ಕೂರ್ಪವರ | ಕಾಣುವದೆ ಲೇಸು ಸರ್ವಜ್ಞ ||
ಜಾತಿ-ಜಾತಿಗೆ ವೈರ | ನೀತಿ ಮೂರ್ಖಗೆ ವೈರ | ಪಾತಕವು ವೈರ ಸುಜನರ್ಗೆ ಅರಿದರಿಗೆ ಏತರದು ವೈರ ಸರ್ವಜ್ಞ ||
ಜಾತಿಹೀನರ ಮನೆಯ | ಜ್ಯೋತಿ ತಾ ಹೀನವೇ | ಜಾತಿ-ವಿಜಾತಿಯೆನ್ನಬೇಡ ದೇವನೊಲಿ | ದಾತನೇ ಜಾತ ಸರ್ವಜ್ಞ ||
ಜಾರತ್ವವೆಂಬುವದು | ಕ್ಷೀರಸಕ್ಕರೆಯಂತೆ | ಊರಲ್ಲಿ ಒಬ್ಬರರಿತಿಹರೆ ಬೇವಿನಾ | ಸಾರದಂತಿಹುದು ಸರ್ವಜ್ಞ ||
ಜಾರಿ ನೆರೆ ಸೇರುವಗೆ | ತೂರರೊಳು ಹೋರುವಗೆ | ಊರಿರುಳ ನಾರಿ ಕಳುವಂಗೆ ತಿಳಿಯದಲೆ | ಮಾರಿ ಬಂದಿಹುದು ಸರ್ವಜ್ಞ ||
ಜಾವಕ್ಕೆ ಬದುಕುವರೆ | ಹೇವಕ್ಕೆ ಬದುಕುವದು | ರಾವಣನು ಸತ್ತನೆನಬೇಡ ರಾಮಂಗೆ | ಹೇವ ಬಿಟ್ಟಿಹುದು ಸರ್ವಜ್ಞ ||
ತೆಂಕಣಕೆ ಮುಗಿಲಡರಿ | ಶಂಕರನೆ ದೆಶ ಮಿಂಚೆ | ಪಂಕಜಾರಾತ ಗುಡಿಗೆಟ್ಟ ಮಳೆಯು ತಾ | ಭೋಂಕನೇ ಬಕ್ಕು ಸರ್ವಜ್ಞ ||
ಧಾತು ಏಳನು ಕಲೆತು | ಭೂತಪಂಚಕವಾಗಿ | ಓತು ದೇಹವನು ಧರಿಸಿರ್ದ ಮನುಜರ್ಗೆ | ಜಾತಿಯತ್ತಣದು ಸರ್ವಜ್ಞ ||
ಬಟ್ಟೆ ಬಟ್ಟೆಯೊಳೆಲ್ಲ | ಹೊಟ್ಟೆ ಜಾಲಿಯ ಮುಳ್ಳು | ಹುಟ್ಟಿದವರೆಲ್ಲ ನಿಜವಾಯಿ ಮೂಡಲ | ಬಟ್ಟೆ ಬೇಡೆಂದ ಸರ್ವಜ್ಞ ||