ಒಟ್ಟು 11 ಕಡೆಗಳಲ್ಲಿ , 1 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎತ್ತಾಗಿ ತೊತ್ತಾಗಿ | ಹಿತ್ತಿಲದ ಗಿಡವಾಗಿ ಮತ್ತೆ ಪಾದದ ಕೆರವಾಗಿ - ಗುರುವಿನ ಹತ್ತಿಲಿರು ಎಂದು ಸರ್ವಜ್ಞ
--------------
ಸರ್ವಜ್ಞ
ಗುರುವಿನ ಸೇವೆಯು | ದೊರಕೊಂಡಿತಾದೊಡೆ ಹರೆವುದು ಪಾಪವರಿದೆನಲು - ವಜ್ರಾಯುಧದಿ ಗಿರಿಯ ಹೊಯ್ದಂತೆ ಸರ್ವಜ್ಞ
--------------
ಸರ್ವಜ್ಞ
ಗುರುವಿನಾ ಸೇವೆಯನು | ಹಿರಿದಾಗಿ ಮಾಡದಲೆ | ಹರಿದಾಡಿ ಮುಕ್ತಿ ಪಡೆಯುವಡೆ ಸ್ವರ್ಗ ತಾ | ಹಿರಿಯ ತವರಹುದೆ ಸರ್ವಜ್ನ್ಯ ||
--------------
ಸರ್ವಜ್ಞ
ತುಪ್ಪವಾದಾ ಬಳಿಕ | ಹೆಪ್ಪನೆರೆದವರುಂಟೆ ನಿಃಪತಿಯಾದ ಗುರುವಿನುಪದೇಶದಿಂ ತಪ್ಪದೇ ಮುಕ್ತಿ ಸರ್ವಜ್ಞ
--------------
ಸರ್ವಜ್ಞ
ದುರ್ಗಿ(ಮಾರಿಯ ಮುಂಡಿ) | ಯಗ್ಗದ ಶಕ್ತಿಗಳು ಸದ್ಗುಣ ಸತ್ಯ ಮುಸುರಿಹರ - ಮುಟ್ಟವು ಸದ್ಗುರುವಿನಾಜ್ಞೆ ಸರ್ವಜ್ಞ
--------------
ಸರ್ವಜ್ಞ
ನೋಟ ಶಿವಲಿಂಗದಹಲಿ | ಜೂಟ ಜ್ಂಗಮದಲಿ | ನಾಟನಾ ಮನವು ಗುರುವಿನಲಿ ಭಕ್ತನಾ ಮಾಟವನು ನೋಡು ಸರ್ವಜ್ಞ ||
--------------
ಸರ್ವಜ್ಞ
ಪರುಷ ಲೋಹವ ಮುಟ್ಟಿ | ವರುಷವಿರಬಲ್ಲುದೇ ಪರಷವೆಂತಂತೆ ಶಿಷ್ಯಂಗೆ - ಗುರುವಿನ ಸ್ಪರುಶನವೆ ಮೋಕ್ಷ ಸರ್ವಜ್ಞ
--------------
ಸರ್ವಜ್ಞ
ಬ್ರಹ್ಮವೆಂಬುದು ತಾನು | ಒಮ್ಮಾರು ನೀಳವೇ ಒಮ್ಮೆ ಸದ್ಗುರುವಿನುಪದೇಶ - | ವಾಲಿಸಲು | ಗಮ್ಮನೆ ಮುಕ್ತಿ ಸರ್ವಜ್ಞ
--------------
ಸರ್ವಜ್ಞ
ಮರಹುಳ್ಳ ಮನುಜರಿಗೆ | ತೆರನಾವುರೆವುದಕೆ ಕರಿಗೊಂಡ ಭ್ರಮೆಯ ಪರೆವ - ಗುರುವಿನ ಭೋಧೆ ಕರಿಗೊಳ್ಳಬೇಕು ಸರ್ವಜ್ಞ
--------------
ಸರ್ವಜ್ಞ
ಮೊಸರ ಕಡೆಯಲು ಬೆಣ್ಣೆ | ಒಸೆದು ತೋರುವ ತೆರದಿ ಹಸನುಳ್ಳ ಗುರುವಿನುಪದೇಶ - ದಿಂ ಮುಕ್ತಿ ವಶವಾಗದಿಹುದೆ ಸರ್ವಜ್ಞ
--------------
ಸರ್ವಜ್ಞ
ಸಾಣೆಕಲ್ಲೊಳು ಗಂಧ | ಮಾಣದೆ ಎಸೆವಂತೆ ಜಾಣ ಶ್ರೀಗುರುವಿನುಪದೇಶ - ದಿಂ ಮುಕ್ತಿ ಕಾಣೆಸುತಿಹುದು ಸರ್ವಜ್ಞ
--------------
ಸರ್ವಜ್ಞ