ಒಟ್ಟು 9 ಕಡೆಗಳಲ್ಲಿ , 1 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದ್ರನಾನೆಯನೇರೆ | ಒಂದುವನು ಕೊಡಲರೆಯ ಚಂದ್ರಶೇಖರನು ಮುದಿಯೆತ್ತ - ನೇರೆ ಬೇ ಕೆಂದುದನು ಕೊಡುವ ಸರ್ವಜ್ಞ
--------------
ಸರ್ವಜ್ಞ
ಕೊಡಲೊಬ್ಬಳು ಸತಿಯು | ನೋಡಲೊಬ್ಬ ನೆಂಟ | ಬೇಡಿದ್ದನ್ನು ಕೊಡುವ ನೃಪತಿಯು ಭಕ್ತಿಯನು | ಮಾಡಿದರಿಗುಂಟು ಸರ್ವಜ್ಞ ||
--------------
ಸರ್ವಜ್ಞ
ಖುಲ್ಲ ಮಾನವ ಬೇಡಿ | ಕಲ್ಲುತಾ ಕೊಡುವದೇ | ಸೊಲ್ಲರಿವ ಶಿವನ ಬೇಡಿದಡೆ ಬಯಸಿದುದು | ನೆಲ್ಲವನು ಕೊಡುವ ಸರ್ವಜ್ಞ ||
--------------
ಸರ್ವಜ್ಞ
ನರಹರಿಯ ಕೊಲುವಂದು | ಎರಳೆಯನೆಸುವಂದು ಮರಳಿ ವರಗಳನು ಕೊಡುವಂದು - ಸ್ಮರಹರೆಗೆ ಸರಿಯಾರ ಕಾಣೆ ಸರ್ವಜ್ಞ
--------------
ಸರ್ವಜ್ಞ
ನೂರು ಹಣ ಕೊಡುವನಕ | ಮೀರಿ ವಿನಯದಲಿಪ್ಪ | ನೂರರೋಳ್ಮೂರ ಕೇಳಿದರೆ ಸಾಲಿಗನು | ತೂರುಣನು ಮಣ್ಣು ಸರ್ವಜ್ಞ ||
--------------
ಸರ್ವಜ್ಞ
ಬೋರಾಡಿ ಸಾಲವನು | ಹಾರ್‍ಆಡಿ ಒಯ್ಯುವನು | ಈರಾಡಿ ಬಂದು ಕೇಳಿದರೆ ಸಾಲಿಗನು | ಚೀರಾಡಿ ಕೊಡುವನು ಸರ್ವಜ್ಞ ||
--------------
ಸರ್ವಜ್ಞ
ಸೊಡರು ಲಂಚವ ಕೊಂಡು | ಕೊಡುವ ದೊಪ್ಪಚಿ ಬೆಳಗ | ಪೊಡವಿಗಂ ಸೂರ್ಯ ಬೆಳಗೀವೋಲ್ಲಂಚವನು | ಹಿಡಿಯದವ ಧರ್ಮಿ ಸರ್ವಜ್ಞ ||
--------------
ಸರ್ವಜ್ಞ
ಹಾಸಾಂಗಿ ಹರೆಯುವಡೆ | ದಾಸಿಯರು ದೊರೆಯುವಡೆ ವೀಸಕ್ಕೆ ವೀಸ ಕೊಡುವಡೆ ಅದು ತನಗೆ | ಈಶನ ಒಲುಮೆ ಸರ್ವಜ್ಞ ||
--------------
ಸರ್ವಜ್ಞ