ಒಟ್ಟು 8 ಕಡೆಗಳಲ್ಲಿ , 1 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅತಿಯಾಶೆ ಮಾಡುವನು | ಗತಿಗೇಡಿಯಾಗುವನು ಅತಿಯಾಶೆಯಿಂದ ಮತಿ ಕೆಡಗು ರತಿಯಿಂದ | ಸತಿ-ಸುತರು ಕೆಡಗು ಸರ್ವಜ್ಞ ||
--------------
ಸರ್ವಜ್ಞ
ಯತಿಗಳಿಗೆ ಮತೆಗೆಡಗು | ಸತಿಯ ಸಜ್ಜನ ಕೆಡಗು | ಮತಿವಂತರೆಲ್ಲ ಭ್ರಮೆಗೊಳಗು ಹೊನ್ನ ಶ್ರುತಿಯ ಕೇಳಿದರೆ ಸರ್ವಜ್ಞ ||
--------------
ಸರ್ವಜ್ಞ
ಯತಿಯ ತಪಗಳು ಕೆಡುಗು | ಪತಿಯ ಪ್ರೇಮವು ಕೆಡುಗು | ಸ್ಥಿತಿವಂತರು ಮತಿ ಕೆಡಗು | ರತಿದೇವಿ ಶ್ರುತಿಯ ಕೇಳಿದರೆ ಸರ್ವಜ್ಞ ||
--------------
ಸರ್ವಜ್ಞ
ವಿಪ್ರರಿಂದಲೇ ವಿದ್ಯೆ | ವಿಪ್ರರಿಂದಲೇ ಬುದ್ಧಿ | ವಿಪ್ರ ನಿಜವಿಪ್ರರಿಲ್ಲದಿರಲೇ ಜಗವು ಕ್ಷಿಪ್ರದಲಿ ಕೆಡಗು ಸರ್ವಜ್ಞ ||
--------------
ಸರ್ವಜ್ಞ
ಸೃಷ್ಟಿಯಲಿ ಜಿನಧರ್ಮ | ಪಟ್ಟಗಟ್ಟಿರುತಿಕ್ಕು | ಕೆಟ್ಟ ಕೆಡಗುಣಗವೆಲ್ಲ ತಲೆಹೋದ | ಅಟ್ಟೆಯಂತಿಕ್ಕು ಸರ್ವಜ್ಞ ||
--------------
ಸರ್ವಜ್ಞ
ಹನುಮಂತನಿಂ ಲಂಕೆ | ಫಲ್ಗುಣನಿಂದ ಜಾಂಡವನ | ತ್ರಿನಯನಿಂ ತ್ರಿಪುರ ಕೆಟ್ಟಂತೆ ಜಗವು ಕುಂ | ಟಿಣಿಯಿಂದ ಕೆಡಗು ಸರ್ವಜ್ಞ ||
--------------
ಸರ್ವಜ್ಞ
ಹುಣಿಸೆಯಿಂ ನೊರೆಹಾಲು | ಗಣಿಕೆಯಿಂ ಹಿರೆಯತನ ಮೇಣಿಸಿನಿಂ ಕದಳೆ ಕೆಡುವಂತೆ ಬಡವ ತಾ | ಸೆಣಸಿನಿಂ ಕೆಡಗು ಸರ್ವಜ್ಞ ||
--------------
ಸರ್ವಜ್ಞ